ಸಚಿವ ಅಶೋಕ್ , ಸುಧಾಕರ್ ಗೆ ರೂಪಾಂತರಿ ನಿಯಂತ್ರಣ ಟಾಸ್ಕ್

Team Newsnap
1 Min Read

ದೇಶದಲ್ಲಿ ಕೊರೊನಾ ಮತ್ತೆ ಮತ್ತೆ ರೂಪ ಬದಲಿಸಿ ವಕ್ಕರಿಸುತ್ತಿದೆ. ಈಗ ಒಮಿಕ್ರಾನ್‌ (Omicron) ಎಂಬ ವೇಷದಲ್ಲಿ ವಿಶ್ವಕ್ಕೆ ಮತ್ತೆ ಪಾದಾಪ೯ಣೆ ಮಾಡಿದೆ

ರಾಜ್ಯದಲ್ಲೂ ಭೀತಿ ಹುಟ್ಟಿಸಿರುವ ಈ ಅಗೋಚರ ವೈರಿಯನ್ನುಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತವೆ ಇದಕ್ಕಾಗಿ ಇಬ್ಬರು ಸಚಿವರಿಗೆ ಸಿಎಂ ಟಾಸ್ಕ್‌ ಈ ಮಧ್ಯೆ, ಸಿಎಂ ಮತ್ತು ಸಂಪುಟದ ಸಚಿವರು ಮಹತ್ವದ ಹೆಜ್ಜೆ ಇರಿಸಿದ್ದಾರೆ.

ಕೊರೊನಾ (Corona) ನಿಯಂತ್ರಣಕ್ಕಾಗಿ ಜವಾಬ್ದಾರಿ ಹಂಚಿಕೆ ಆಗಿದೆ. ಆರ್.ಅಶೋಕ್, ಡಾ.ಕೆ.ಸುಧಾಕರ್‌ಗೆ ಮಹತ್ವದ ಸೂಚನೆ ನೀಡಿರುವ ಸಿಎಂ ಬೊಮ್ಮಾಯಿ, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದ್ದಾರೆ

ಆಫ್ರಿಕಾ ನೆಲದಿಂದ ಕೊರೊನಾ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿದೆ. ಮಾನವನ ದೇಹಕ್ಕೆ ನುಗ್ಗಿ, ರೋಗ ನಿರೋಧಕ ಶಕ್ತಿ ಕುಗ್ಗುವಂತೆ ದಾಂಗುಡಿ ಇಡುತ್ತಿದೆ ಆಫ್ರಿಕಾದ ದಕ್ಷಿಣ ತುದಿಯಿಂದ ಇಡೀ ವಿಶ್ವವ್ಯಾಪಿ ತನ್ನ ಕಬಂಧಬಾಹುವನ್ನ ವಿಸ್ತರಿಸಿಕೊಳ್ತಿದೆ.
ಹೌದು ಒಮಿಕ್ರಾನ್​​​ ಹೆಸರು ಹೊತ್ತುಕೊಂಡು ಆತಂಕ ಸೃಷ್ಟಿಸಿದೆ. ರಾಜ್ಯದಲ್ಲೂ ಕೊರೊನಾ ಹೊಸ ತಳಿ ಒಮಿಕ್ರಾನ್‌ ಭೀತಿ ಆವರಿಸಿದೆ. ಒಮಿಕ್ರಾನ್​​​ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಸೂಚನೆ ಹೊರಡಿಸಲಾಗಿದೆ. ಯಾವುದೇ ಆತಂಕ ಬೇಡ ಅಂತ ಸಿಎಂ ಹೇಳಿದ್ದಾರೆ, ಎಚ್ಚರಿಕೆ ವಹಿಸೋದು ಅತ್ಯಗತ್ಯ ಎಂದೂ ಸಹ ತಿಳಿಸಿದ್ದಾರೆ.

Share This Article
Leave a comment