May 26, 2022

Newsnap Kannada

The World at your finger tips!

udasi

ಒಂದೆರಡು ದಿನದಲ್ಲಿ ನವೀನ್​ ಮೃತದೇಹ ಭಾರತಕ್ಕೆ ಬರುವ ನಿರೀಕ್ಷೆಯಿದೆ-ಸಂಸದ ಉದಾಸಿ

Spread the love

ಉಕ್ರೇನ್​ನಲ್ಲಿ ಮೃತಪಟ್ಟಿರುವ ರಾಜ್ಯದ ಚಳಗೇರಿ ವಿದ್ಯಾರ್ಥಿ ನವೀನ್​ ಮೃತದೇಹವನ್ನು, ಭಾರತಕ್ಕೆ ಕರೆತರುವ ವಿಚಾರಕ್ಕೆ ವಿದೇಶಾಂಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹಾವೇರಿ ಸಂಸದ ಶಿವಕುಮಾರ್​ ಉದಾಸಿ ಹೇಳಿದ್ದಾರೆ.

ದೆಹಲಿಯಲ್ಲಿ ಸಂಸದ ಶಿವಕುಮಾರ್ ಉದಾಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿನ್ನೆ ನವೀನ್​ ಕುಟುಂಬವನ್ನು ಭೇಟಿ ಮಾಡಿದ್ದೆ. ನವೀನ್ ಮೃತ ದೇಹವನ್ನು ಭಾರತಕ್ಕೆ ತರಲು ಮನವಿ ಮಾಡಿದ್ದಾರೆ.

ಬುಧವಾರ ವಿದೇಶಾಂಗ ಸಚಿವರನ್ನು ಕೂಡ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿದ್ದು, ಉಕ್ರೇನ್ ಮತ್ತು ರಷ್ಯಾ ಎರಡು ಕಡೆಯಿಂದಲೂ ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಮೃತದೇಹವನ್ನು ಹೇಗೆ ತರಬಹುದು ಎಂದು ರಾಯಭಾರಿ ಕಚೇರಿ ಜೊತೆಗೆ ಚರ್ಚೆ ಮಾಡಿದ್ದಾರೆ. ಒಂದೇರಡು ದಿನಗಳಲ್ಲಿ ಮೃತ ದೇಹವನ್ನು ತರುವ ನಿರೀಕ್ಷೆಗಳಿದೆ. ನವೀನ್​ಗೆ ಮೆಟಲ್ ಬಡಿದು ಸಾವು ಸಂಭವಿಸಿರುವ ಸಾಧ್ಯತೆ ಇದೆ.

ಬಾಂಬ್​ ಬಿದ್ದಿದ್ದರೇ ದೇಹದ ಅವಶೇಷಗಳು ದೊರಕುತ್ತಿರಲಿಲ್ಲ.
ಸ್ಫೋಟದ ತೀವ್ರತೆಯಿಂದ ಯಾವುದಾದರೂ ಮೆಟಲ್ ನಿಂದ ಪೆಟ್ಟು ಬಿದ್ದಿರುವ ಸಾಧ್ಯತೆ ಇದೆ ಎಂದು ಉದಾಸಿ ಹೇಳಿದ್ದಾರೆ.

error: Content is protected !!