November 23, 2024

Newsnap Kannada

The World at your finger tips!

navarathri , goddess , festival

ವಿಜೃಂಭಣೆಯ ನವರಾತ್ರಿ ವೈಭವ

Spread the love
krupa santhosh
ಕೃಪ ಸಂತೋಷ್

ಆಷಾಢ ಕಳೆದು ಶ್ರಾವಣ ಬಂತೆಂದರೆ ಸಾಲು ಸಾಲು ಹಬ್ಬಗಳು. ಬರೀ ಸಂಭ್ರಮ, ವಿಜೃಂಭಣೆಯ ಆಚರಣೆ ದಿನನಿತ್ಯದ ಜಂಜಾಟಗಳ ನಡುವೆ ಒಂದಷ್ಟು ಖುಷಿ

ಹಬ್ಬಗಳಲೆಲ್ಲ ಅತೀ ವಿಶಿಷ್ಟವಾದ ಮತ್ತು ಎಲ್ಲಾ ಕಡೆಗಳಲ್ಲೂ ಆಚರಿಸುವ ಹಬ್ಬ ದಸರಾ ನಮ್ಮ ನಾಡ ಹಬ್ಬ ಈ ನವರಾತ್ರಿ ವೈಭವ ಒಂದೊಂದು ಕಡೆ ಒನ್ನೊಂದು ರೀತಿಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ ಮೈಸೂರಿನ ದಸರಾ ಅಂತೂ ಜಗತ್ಪ್ರಸಿದ್ಧಿಯಾಗಿದೆ.

ಇನ್ನು ಈ ನವರಾತ್ರಿಯ ಆಚರಣೆ ಪ್ರಾರಂಭವಾಗಿದ್ದು ಹೇಗೆ ಅಂತ ತಿಳಿಯೋದಾದ್ರೆ ಪುರಾಣಗಳಲ್ಲಿ ಹಲವಾರು ರೀತಿಯ ಉಲ್ಲೇಖವಿದೆ ಅಲ್ಲಿ ಮುಖ್ಯವಾದದ್ದು ಎರಡು ವಿಧ

  1. ಚೈತ್ರ ನವರಾತ್ರಿ
  2. ಶರನ್ನವರಾತ್ರಿ
  3. ವಿಜಯನಗರದ ಅರಸರು ಹಾಗೂ ಮೈಸೂರಿನ ಅರಸರು ಚೈತ್ರ ಯಾತ್ರೆಯಲ್ಲಿ ಜಯಗಳಿಸಿದ ಸಂಭ್ರಮಕ್ಕಾಗಿ ಚೈತ್ರ ನವರಾತ್ರಿಯನ್ನಾಗಿ ಆಚರಿಸಲಾಯಿತು ಎಂಬ ಉಲ್ಲೇಖವಿದೆ.
  4. ಪುರಾಣಗಳ ಪ್ರಕಾರ ರಾಮನಿಂದ ರಾವಣನ ವದೆಯಾಗಬೇಕಾದರೆ ಶರನ್ನವರಾತ್ರಿ ವೃತವನ್ನು ಮಾಡಲು ನಾರದರು ಸೂಚಿಸುತ್ತಾರೆ ಅಂತೆಯೇ ವೃತ ಪೂರ್ಣಗೊಂಡ ನಂತರವೇ ರಾವಣನ ಸಂಹಾರವಾಗಿದ್ದು ರಾಮ ಯುದ್ಧ ಗೆದ್ದಿದ್ದು ಎನ್ನಲಾಗಿದೆ
    ಇನ್ನೂ ಜಗನ್ಮಾತೆ ರಾಕ್ಷಸರನ್ನು ಸಂಹಾರ ಮಾಡಲು ಒಂಬತ್ತು ದಿನಗಳ ಕಾಲ ( ಪಾಡ್ಯದಿಂದ ನವಮಿಯವರೆಗೆ ) ದಿನಕ್ಕೊಂದು ಅವತಾರವೆತ್ತಿ ಒಂಬತ್ತನೇಯ ದಿನ ಮಹಿಷಾಸುರನನ್ನು ಸಂಹಾರ ಮಾಡಿ ಮಹಿಷಾಸುರಮರ್ದಿನೀಯಾಗಿ ಭಕ್ತರ ಮನಸಲ್ಲಿ ನೆಲೆಸಿದ್ದಾಳೆ ಎಂಬ ಪ್ರತಿತಿಯಿದೆ ಹೀಗೆ ಪ್ರಾರಂಭವಾದ ನವರಾತ್ರಿಯ ವೈಭವ ದೇಶದ ಎಲ್ಲೆಡೆಯೂ 9 ದಿನಗಳ ಕಾಲ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ
    ವಿಶೇಷವಾಗಿ ಏಳನೆಯ ದಿನ ದುರ್ಗಾಷ್ಟಮಿ ಎಂಟನೆಯ ದಿನ ಆಯುಧ ಪೂಜೆ ಮತ್ತು ಕೊನೆಯ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ.

ಇಲ್ಲಿ ಆಯುಧ ಪೂಜೆ ತುಂಬಾ ವಿಶಿಷ್ಟವಾದದ್ದು ಇದು ಹೇಗೆ ಪ್ರಚಲಿತವಾಯಿತು ಎಂದು ತಿಳಿಯುವುದಾದರೆ
ದ್ವಾಪರಯುಗದಲ್ಲಿ ಪಾಂಡವರು 13 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸದ ಸಮಯದಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದ ಕೆಳಗೆ ಬಚ್ಚಿಟ್ಟಿರುತ್ತಾರೆ ಹೀಗೆ ಬಚ್ಚಿಟ್ಟಿದ್ದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎನ್ನಲಾಗಿದೆ ನಂತರ ಅದೇ ಆಯುಧಗಳಿಂದ ವಿರಾಟರಾಜನ ಶತ್ರುಗಳ ವಿರುದ್ಧ ಹೋರಾಡಿ ವಿಜಯ ಸಾಧಿಸಿರುತ್ತಾರೆ ಈ ಸಂಭ್ರಮವನ್ನೇ ವಿಜಯದಶಮಿಯಾಗಿ ಆಚರಿಸಲಾಗಿದೆ ಎಂಬ ಪ್ರತಿತಿ ಇದೆ.

ಅಡುಗೆ ಮನೆಯಲ್ಲಿ ತರಕಾರಿ ಕೊಯ್ಯುವ ಚಾಕುವಿನಿಂದ ಹಿಡಿದು ಸೈನಿಕರ ಕೈಯಲ್ಲಿ ಇರೋ ಬಂದುಕಿನವರೆಗೂ,
ಚಿಕ್ಕ ಮಕ್ಕಳು ಆಟ ಆಡುವ ಸೈಕಲ್ ನಿಂದ ಹಿಡಿದು ಯುದ್ಧ ವಿಮಾನದವರೆಗೂ ಬಗೆ ಬಗೆಯಾಗಿ ಅಲಂಕರಿಸಿ ಪೂಜಿಸಲಾಗುತ್ತದೆ.

ಹಾಗೇನೇ ವಿಜಯದಶಮಿಯ ದಿನದಂದು ಅದೇ ಬನ್ನಿ ಮರಕ್ಕೆ ಪೂಜಿಸಿ ಬನ್ನಿ ಎಲೆಯನ್ನು ಒಬ್ಬರಿಂದ ಇನ್ನೊಬ್ಬರಿಗೆ ಹಂಚುವ ಮೂಲಕ ಸ್ನೇಹ ಭಾಂದವ್ಯವನ್ನು ವಿಮಯ ಮಾಡಿಕೊಳ್ಳಲಾಗುತ್ತದೆ.

ಒಟ್ಟಾರೆಯಾಗಿ ಒಂದೊಂದು ಪ್ರಾಂತ್ಯಗಳಲ್ಲಿ ಒಂದೊಂದು ರೀತಿಯಲ್ಲಿ ಅಂದರೆ ತಮಗೆ ಅನುಕೂಲಕ್ಕೆ ತಕ್ಕಂತೆ ನವರಾತ್ರಿಯನ್ನು ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ.

ಎಲ್ಲದಕ್ಕಿಂತ ಕಣ್ ಮನಸಳೆಯುವುದು ಅವರವರ ಸಂಪ್ರದಾಯದ ಕಲೆಗಳಂತೆ ಹುಲಿ ವೇಷ ದೊಳ್ಳು ಕುಣಿತ ಕಂಸಾಳೆ ತಟ್ಟಿರಾಯ ಕೋಲಾಟ ಹೀಗೆ ವಿವಿಧವಾದ ಜಾನಪದ ಕಲೆಗಳನ್ನು ಒಳಗೊಂಡು ಇನ್ನೂ ಹತ್ತು ಹಲವಾರು ವೇಷ ಭೂಷಣಗಳ ಮೂಲಕ ಅಂಬಾರಿಯ ಜೊತೆಗೆ ಮೆರವಣಿಗೆ..

Copyright © All rights reserved Newsnap | Newsever by AF themes.
error: Content is protected !!