January 29, 2026

Newsnap Kannada

The World at your finger tips!

jaggesh appu

ಅಪ್ಪು ಜೊತೆಗೆ ಕೊನೆ ಕ್ಷಣದ ವೀಡಿಯೋ ಹಂಚಿಕೊಂಡ ನವರಸ ನಾಯಕ

Spread the love

ನವರಸ ನಾಯಕ ಜಗ್ಗೇಶ್ ದಿ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆಗೆ ಕಾಲ ಕಳೆದ ಕೊನೆಯ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/CZ0qv6CK_Qi/?utm_medium=copy_link

ಅಪ್ಪುಗೆ ಜಗ್ಗೇಶ್ ಬಹಳ ಆಪ್ತ. ಅಪ್ಪು ಅವರೊಂದಿಗೆ ಜಗ್ಗೇಶ್ ಮಧುರ ಕ್ಷಣಗಳನ್ನು ಕಳೆದಿದ್ದಾರೆ.

ಅಪ್ಪು ಅವರನ್ನು ಕಳೆದುಕೊಂಡಗಿನಿಂದ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಜೊತೆಗೆ ಕಾಲ ಕಳೆದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅದೇ ರೀತಿ ಜಗ್ಗೇಶ್ ಇಂದು ಸಹ ಅಪ್ಪು ಜೊತೆ ಕಾಲ ಕಳೆದ ವಿಶೇಷ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪ್ರೋ.ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲಿಯೇ ರಾಯರ ಜೊತೆ ಉಳಿದುಬಿಟ್ಟ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

error: Content is protected !!