ರಾಷ್ಟ್ರೀಯ ನಿರುದ್ಯೋಗ ದಿನವಾಯ್ತು ಪ್ರಧಾನಿ ಮೋದಿ ಜನ್ಮದಿನ

Team Newsnap
1 Min Read

ಇಡೀ ದೇಶದಲ್ಲಿ ಬಿಜೆಪಿ ಹಾಗೂ ಪ್ರತಿಪಕ್ಷಗಳು ಮೋದಿಯವರಿಗೆ ೭೦ನೇ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ‌. ಆದರೆ ದೇಶದ ಯುವ ಸಮುದಾಯ ಮಾತ್ರ ಮೋದಿ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಟ್ವಿಟರ್ ನಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಬರೆದುಕೊಂಡು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಠಿ ಮಾಡುವ ಭರವಸೆಯನ್ನು ನೀಡಿದ್ದ ಮೋದಿಯವರ ವಿರುದ್ಧ ನಿರುದ್ಯೋಗಿ ಯುವಕರು ಹರಿಹಾಯ್ದಿದ್ದಾರೆ.

ಪ್ರಸ್ತುತ ಕೊರೋನಾ ಕಾರಣದಿಂದ ಭಾರತದ ಜಿಡಿಪಿ ೨೩.೯ಕ್ಕೆ ಇಳಿಕೆಯಾಗಿದೆ. ಕಂಪನಿಗಳ ಉತ್ಪಾದಕತೆ ಕಡಿಮೆ ಆಗಿರುವದರಿಂದ ಅನೇಕ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಸೆಂಟರ್ ಫಾರ್ ಇಂಡಿಯನ್ ಎಕಾನಮಿ ವರದಿಯ ಪ್ರಕಾರ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಶೇ‌. ೮.೩% ರಷ್ಟಿದೆ.

ಈ ಅಂಶಗಳ ಹಿನ್ನಲೆಯಲ್ಲಿ ಯುವಕರು ಟ್ವಿಟರ್ ನಲ್ಲಿ ಮೋದಿಯವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ‌.

Share This Article
Leave a comment