ಬೆಂಗಳೂರು : ಇನ್ಫೋಸಿಸ್ (Infosys) ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಸುಧಾಮೂರ್ತಿ ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ.
ಸರಳ ಜೀವನ ನಡೆಸುತ್ತಿರುವ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಅನೇಕರಿಗೆ ಮಾದರಿಯಾಗಿದ್ದಾರೆ.ಮೈಸೂರು – ಮಂಡ್ಯ ಜಿಲ್ಲೆಯಲ್ಲಿ ‘ತಿಮ್ಮಕ್ಕ ಟ್ರೀ ಪಾರ್ಕ್’ ನಿರ್ಮಾಣಕ್ಕೆ ಸಚಿವ ಖಂಡ್ರೆ ಸೂಚನೆ
ನಲವತ್ತೈದು ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ಸಲ್ಲಿಸಿದ್ದಾರೆ .