ನಂದಿನಿ ಹಾಲಿನ ದರ 3 ರು ಏರಿಕೆ : ತುಪ್ಪದ ಬೆಲೆ 100 ಏರಿಕೆ ಗ್ರಾಹಕರಿಗೆ ಭಾರಿ ಶಾಕ್

Team Newsnap
1 Min Read

ನಂದಿನಿ ಹಾಲು ಪ್ರತಿ ಲೀಟರ್ ಗೆ 3 ರು ಹೆಚ್ಚಳ ಮಾಡಲುಕೆಎಂಎಫ್ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಮುದ್ರೆಯನ್ನು ಒತ್ತಬೇಕಾಗಿರುವುದು ಬಾಕಿ ಇದೆ. ಆದರೂ ಕೆಎಂಎಫ್ ತನಗಿರುವ ಅಧಿಕಾರ ಬಳಕೆ ಮಾಡಿಕೊಂಡು ದರ ಹೆಚ್ಚಳ ಮಾಡಲು ಮುಂದಾಗಿದೆ.

ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕೆಎಂಎಫ್ ನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಲೆ ಏರಿಕೆಗೆ ಸಂಬಂಧಪಟ್ಟಂತೆ ಈಗಾಗಲೇ ತಮ್ಮ ಮೇಲೆ ರಾಜ್ಯದ ಜಿಲ್ಲಾ ಹಾಲು ಒಕ್ಕೂಟಗಳು ಹಾಕುತ್ತಿರುವ ಒತ್ತಡದ ಬಗ್ಗೆ ಸಿಎಂ ಬಳಿ ಚರ್ಚಿಸಿದ್ದರೆ ಎನ್ನಲಾಗಿದೆ.

ಕೆಎಂಎಫ್, 3 ರೂ. ಹೆಚ್ಚಳ ಮಾಡಿದರೆ, ಅದರ ಲಾಭವನ್ನು ರೈತರಿಗೆ ನೀಡಲು ನಿರ್ಧಾರ ಮಾಡಿದೆ ಎನ್ನಲಾಗಿದೆ.

ನಂದಿನಿ ತುಪ್ಪದ ಬೆಲೆಯಲ್ಲಿ ಭಾರೀ ಏರಿಕೆ:

ನಂದಿನಿ ತುಪ್ಪದ ಬೆಲೆಯಲ್ಲಿ ಒಂದು ತಿಂಗಳಲ್ಲಿ 100 ರೂ. ಏರಿಕೆಯಾಗಿದೆ. ಕರ್ನಾಟಕ ಹಾಲು ಒಕ್ಕೂಟವು ತುಪ್ಪದ ಬೆಲೆಯನ್ನು ಹೆಚ್ಚಿಸಿದೆ.

ಒಂದು ಲೀಟರ್ ತುಪ್ಪದ ಬೆಲೆಯು 570 ಗೆ ಏರಿಕೆಯಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು ನಂದಿನಿ ನಿರಂತರವಾಗಿ ಹೆಚ್ಚಿಸುತ್ತಿದೆ.

ರೋಹಿಣಿ ಸಿಂಧೂರಿ ವಿರುದ್ದ 1 ಕೋಟಿ ರು ಮಾನನಷ್ಟ ಮೊಕದ್ದಮೆ ದಾಖಲು – ಸಾರಾ ಮಹೇಶ್

ಆಗಸ್ಟ್‌ ತಿಂಗಳಲ್ಲಿ ಒಂದು ಲೀಟರ್‌ ನಂದಿನಿ ತುಪ್ಪದ ದರ ಸುಮಾರು 450 ರೂ. ಇತ್ತು. ಬಳಿಕ ಸೆಪ್ಟೆಂಬರ್‌ 10ರ ವೇಳೆಗೆ ಈ ದರ 518.18 ರೂ. ಗೆ ಏರಿದೆ. ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್‌ಗೆ 570 ರು ಮಾಡಲಾಗಿದೆ.

ಕರ್ನಾಟಕ ಹಾಲು ಒಕ್ಕೂಟವು ಆಗಸ್ಟ್ ನಿಂದ ಸೆಪ್ಟೆಂಬರ್ 10 ಒಳಗೆ ಹಂತಹಂತವಾಗಿ ತುಪ್ಪದ ಬೆಲೆಯನ್ನು ಏರಿಕೆ ಮಾಡುತ್ತಿದೆ ಒಂದು ತಿಂಗಳಲ್ಲಿ ಸುಮಾರು 100 ರೂ.ನಷ್ಟು ಹೆಚ್ಚಳವಾಗಿದೆ.

Share This Article
Leave a comment