‘ ನಮ್ಮ ಕ್ಲಿನಿಕ್ ‘ ಹೊಸ ರೂಪದಲ್ಲಿ : ವೈದ್ಯಕೀಯ ಸೇವೆ ರಾತ್ರಿ 8 ಗಂಟೆವರೆಗೂ ಲಭ್ಯ

Team Newsnap
1 Min Read

ಬೆಂಗಳೂರು : ರಾಜ್ಯದಲ್ಲಿ ನಮ್ಮ ಕ್ಲಿನಿಕ್ ಗಳನ್ನು ನಂಬರ್ 1 ಕ್ಲಿನಿಕ್‍ಗಳನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಭಿನ್ನ ಪ್ರಯೋಗಗಳಿಗೆ ಚಾಲನೆ ನೀಡಿದ್ದಾರೆ.

ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆಯನ್ನ ನಮ್ಮ ಕ್ಲಿನಿಕ್ ಗಳ ಮುಖಾಂತರ ಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಗಳಿಗೆ ಹೊಸ ಕಾಯಕಲ್ಪ ನೀಡಲು ಯೋಜನೆ ರೂಪಿಸಲಾಗಿದೆ.

ಮೊದಲ ಹಂತವಾಗಿ ರಾಜ್ಯದಲ್ಲಿರುವ ನಮ್ಮ ಕ್ಲಿನಿಕ್‍ಗಳಲ್ಲಿ ಶೇ 25 ರಷ್ಟು ಕ್ಲಿನಿಕ್ ಗಳ ಸಮಯ ಬದಲಾವಣೆಗೆ ನಿರ್ಧರಿಸಲಾಗಿದೆ. ನಮ್ಮ ಕ್ಲಿನಿಕ್‍ಗಳು ಬೆಳಗ್ಗೆ 9 ಗಂಟೆಗೆ ತೆರದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತೆ. ಬಳಿಕ ಮಧ್ಯಾಹ್ನ 2 ಗಂಟೆಗೆ ತೆರೆದು 4.30ಕ್ಕೆ ಮುಚ್ಚುತಿದ್ದರು.

ಇದೀಗ ನಮ್ಮ ಕ್ಲಿನಿಕ್‍ ಗಲನ್ನು (Namma Clinic) ಸಂಜೆ ಕ್ಲಿನಿಕ್ ಮಾದರಿಯಲ್ಲಿ ಸಮಯ ಬದಲಾಯಿಸಲು ನಿರ್ಧರಿಸಲಾಗಿದೆ.

ರಾತ್ರಿಯವರೆಗೂ ನಮ್ಮ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುವಂತೆ ಸಮಯ ಬದಲಾವಣೆ ಮಾಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದ್ದರು. ಹೊಸ ಸಮಯದ ಪ್ರಕಾರ ಬೆಳಗ್ಗೆ 7 ಗಂಟೆಗೆ ನಮ್ಮ ಕ್ಲಿನಿಕ್‍ಗಳು ತೆರೆಯಲಿದ್ದು, ಬೆಳಗ್ಗೆ ಹೊತ್ತಿನಲ್ಲಿ ಲ್ಯಾಬ್ ಟೆಕ್ನಿಷಿಯನ್ ಮಾತ್ರ ಇರುತ್ತಾರೆ. ಬಳಿಕ 12 ಗಂಟೆಯಿಂದ 8 ಗಂಟೆವರೆಗೂ ವೈದ್ಯರು ಹಾಗೂ ನರ್ಸ್ ಜನರಿಗೆ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಲಾಗಿದೆ.ಗ್ರೇಡ್ -1 , ಗ್ರೇಡ್ -2 ತಹಶೀಲ್ದಾರ್ ಗಳ ವರ್ಗಾವಣೆ

ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಶೇ.25 ರಷ್ಟು ಕ್ಲಿನಿಕ್‍ ಗಳನ್ನು ಪ್ರಾಯೋಗಿಕ ಹಂತದಲ್ಲಿ ಸಮಯ ಬದಲಾವಣೆ ಮಾಡಲಾಗುತ್ತಿದೆ.

ನಮ್ಮ ಕ್ಲಿನಿಕ್ , #nammaclinic #karnatakaGovernment #Health #BREAKINGNEWS #ನಮ್ಮ_ಕ್ಲಿನಿಕ್

Share This Article
Leave a comment