ಮೃಗಾಲಯದಲ್ಲಿ ಜನಿಸಿದ ಮೂರು ಸಿಂಹದ ಮರಿಗಳಿಗೆ ನಾಮಕರಣ

Team Newsnap
1 Min Read
Naming three lion cubs born at the zoo ಮೃಗಾಲಯದಲ್ಲಿ ಜನಿಸಿದ ಮೂರು ಸಿಂಹದ ಮರಿಗಳಿಗೆ ನಾಮಕರಣ
  • ಮೈಸೂರು ಮೃಗಾಲಯಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ

ಮೈಸೂರು: ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಎರಡು ಗಂಡು ಸಿಂಹದ ಮರಿಗಳು ಮತ್ತು ಒಂದು ಹೆಣ್ಣು ಸಿಂಹದ ಮರಿಗೆ ಅನುಕ್ರಮವಾಗಿ ಸೂರ್ಯ, ಚಂದ್ರ ಮತ್ತು ಕಬಿನಿ ಎಂಬ ಹೆಸರುಗಳನ್ನು ಇಡಲಾಯಿತು.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಈ ಸಂದರ್ಭದಲ್ಲಿ ಹಾಜರಿದ್ದರು.

ಮೃಗಾಲಯದಲ್ಲಿರುವ ರಾಜ ಮತ್ತು ನಿರ್ಭಯ ಸಿಂಹದ ಮರಿಗಳ ಹೆಸರಿನ ಫಲಕ ಅನಾವರಣ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರು ಮೃಗಾಲಯವನ್ನು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇದು ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಅಭಿವೃದ್ಧಿ ಸಾಧಿಸಬೇಕು ಎಂಬುದು ತಮ್ಮ ಇಂಗಿತವಾಗಿದೆ ಎಂದರು.

ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಅದರಲ್ಲೂ ಮಕ್ಕಳು ಆಗಮಿಸುತ್ತಿದ್ದು ಅವರಿಗೆ ಪ್ರಾಣಿ ಸಂಕುಲ ಸಸ್ಯ ಸಂಕುಲ ಬಗ್ಗೆ ಹಾಗೂ ವನ್ಯಮೃಗಗಳ ಬಗ್ಗೆ ಮಾಹಿತಿ ತಿಳಿಯಲು ಸಹಕಾರಿಯಾಗಿದೆ ಮನರಂಜನೆಯು ಲಭಿಸುತ್ತದೆ ಎಂದರು.ಮುಂಬೈ ಬೀಚ್ ನಲ್ಲಿ ಮಕ್ಕಳ ಎದುರಿನಲ್ಲೇ ಸಮುದ್ರದ ಅಲೆಯ ಪಾಲಾದ ತಾಯಿ

ಈ ಬಾರಿಯ ಮೈಸೂರು ದಸರಾ ಜಂಬೂಸವಾರಿಗೆ ಬರುವ ಆನೆಗಳ ಕುರಿತಂತೆ ಇಂದು ನಡೆಯಲಿರುವ ಸಭೆಯಲ್ಲಿ ಚರ್ಚಿಸುವುದಾಗಿಯೂ ಸಚಿವರು ತಿಳಿಸಿದರು.

Share This Article
Leave a comment