ಹಾಲಹಳ್ಳಿ ಸ್ಲಂ ಬಡಾವಣೆಗೆ ‘ಅಂಬರೀಶ್ ನಗರ’ ಎಂದು ನಾಮಕರಣ- ಬೇಲೂರು ಸೋಮು

Team Newsnap
1 Min Read

ಸಂಸದೆ ಸುಮಲತಾ ಕೋರಿಕೆ ಮೇರೆಗೆ ಮಂಡ್ಯದ ಹಾಲಹಳ್ಳಿ ಸ್ಲಂನ 632 ಮನೆಗಳನ್ನು ತ್ವರಿತವಾಗಿ ಮುಗಿಸಿದಲ್ಲದೆ ಬಾಕಿ ಉಳಿದ 88 ಮನೆಗಳಿಗೆ ಅಗತ್ಯವಿದ್ದ ಹಣ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರದ ವಸತಿ ಸಚಿವ ವಿ. ಸೋಮಣ್ಣ ರವರಿಗೆ ಮಂಡ್ಯ ಜನರ ಪರವಾಗಿ ಅಭಿನಂದಿಸಲಾಯಿತು.

. ಬಡಾವಣೆಯ ನಿರ್ಮಾಣಕ್ಕೆ ಶ್ರಮಿಸಿದ ಅಂಬರೀಶ್ ರವರ ಹೆಸರನ್ನು ನಾಮಕರಣ ಮಾಡಲು ಸರ್ಕಾರದ ಆದೇಶ ಮಾಡಿಸಿ, ‘ಡಾ. ಎಂ. ಹೆಚ್. ಅಂಬರೀಶ್ ‘ ನಗರ ಎಂದು ಘೋಷಿಸಿದ ವಸತಿ ಸಚಿವರಿಗೆ ಮಂಡ್ಯ ನಾಗರಿಕರ ಪರವಾಗಿ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘ ಹಾಗೂ ಮಂಡ್ಯ ಜಿಲ್ಲಾ ಸ್ವಾಭಿಮಾನಿ ಪಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸರ್ಕಾರದಿಂದಲೇ ಕಣ್ಣಿನ ಉಚಿತ ಚಿಕಿತ್ಸೆಗೆ ಯೋಜನೆ : ರಾಜ್ಯದಲ್ಲಿ ಮೊದಲ ಬಾರಿ ಜಾರಿಗೆ – ಸಿಎಂ ಬೊಮ್ಮಾಯಿ

ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್, ಹಾಲಹಳ್ಳಿ ಅರವಿಂದ್ ಕುಮಾರ್ ಹಾಗೂ ಸಮಾಜ ಸೇವಕರಾದ ಕೀಲಾರ ರಾಧಾಕೃಷ್ಣ ರವರು ಉಪಸ್ಥಿತರಿದ್ದರು.

Share This Article
Leave a comment