December 26, 2024

Newsnap Kannada

The World at your finger tips!

nagamangal kere

ನಾಗಮಂಗಲ :ತಂದೆ, ಮಗನ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ಸಿಂಧು ಬಂಧನ

Spread the love

ಜ 13 ರಂದು ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲಿನಲ್ಲಿ ತಂದೆ, ಮಗ ಕೆರೆಗೆ ಹಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಸಿಂಧೂ ಳನ್ನು ಪೊಲೀಸರು ಬಂಧಿಸಿದ್ದಾರೆ.

ಜ.13 ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ 45 ವರ್ಷದ ಗಂಗಾಧರ್,  ತನ್ನ 6 ವರ್ಷದ ಮಗ ಜಶ್ವಿತ್​ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು

ಸಾವಿಗೂ ಮುನ್ನ ವೀಡಿಯೋ ಮಾಡಿರುವ ಗಂಗಾಧರ್​ ತನ್ನ ಸಾವಿಗೆ ಪತ್ನಿಯ ಅಕ್ರಮ ಸಂಬಂಧ ಕಾರಣ ಎಂದು ವೀಡಿಯೋದಲ್ಲಿ ಆರೋಪಿಸಿದ್ದಾರೆ.

ಪತ್ನಿ ಸಿಂಧು ಹಾಗೂ ಎಲ್.ಐ.ಸಿ ಏಜೆಂಟ್ ನಂಜುಂಡೇಗೌಡನ ನಡುವೆ ಅನೈತಿಕ ಸಂಬಂಧ ಇತ್ತು. ಈ ಬಗ್ಗೆ ಕೇಳಿದರೆ ಇಬ್ಬರು ನನಗೆ ಕಿರುಕುಳ ನೀಡುತ್ತಿದ್ದರು ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.

ಜೊತೆಗೆ ನನ್ನ ಪತ್ನಿ ಆತನ ಜೊತೆ ವೀಡಿಯೋ ಕಾಲ್​ನಲ್ಲಿ ಮಾತನಾಡುತ್ತಿದ್ದಳು ಎಂದು ಆರೋಪ ಮಾಡಿದ್ದು, ವೀಡಿಯೋ ಮೂಲಕ ಪತ್ನಿ ಸಿಂಧು ಹಾಗೂ ನಂಜುಂಡೇಗೌಡನ ವಿರುದ್ಧ ಆರೋಪಿಸಿ ತನ್ನ ಹಾಗೂ ಮಗನ ಸಾವಿಗೆ ಇಬ್ಬರೇ ಕಾರಣ ಎಂದು ಆರೋಪಿಸಿದ್ದಾನೆ.

ಮೃತ ಗಂಗಾಧರ್​ ಅಣ್ಣ ನೀಡಿದ ದೂರಿನ ಹಿನ್ನೆಲೆ ಮೃತನ ಪತ್ನಿ ಸಿಂಧುಳನ್ನು ಪೊಲೀಸರು ಬಂಧಿಸಿದ್ದಾರೆ.

ನಾಗಮಂಗಲದ ಬಿಂಡಿಗನವೀಲೆ ಪೊಲೀಸ್​ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Copyright © All rights reserved Newsnap | Newsever by AF themes.
error: Content is protected !!