ಮೈಸೂರಿನಲ್ಲೊಂದು ಅಪೂರ್ವ ಮದುವೆ- 85ರ ವರ, 65ರ ವಧು.. ಮಕ್ಕಳ ಸಮ್ಮುಖದಲ್ಲಿ ದಾಂಪತ್ಯಕ್ಕೆ ಹೆಜ್ಜೆ

Team Newsnap
1 Min Read

ಮೈಸೂರಿನ ಉದಯಗಿರಿಯ ಗೌಸಿಯಾನಗರದ ಮನೆಯಲ್ಲಿ ಇಳಿ ವಯಸ್ಸಿನ ವೃದ್ಧರು ಸತಿಪತಿಗಳಾಗಿದ್ದಾರೆ.

ಕುಟುಂಬಸ್ಥರ ಸಮ್ಮುಖದಲ್ಲಿ ಗೌಸಿಯಾನಗರದ ಹಾಜಿ ಮುಸ್ತಫಾ (85) ಹಾಗೂ ಫಾತಿಮಾ ಬೇಗಂ (65) ಬಾಳಸಂಗಾತಿಯಾದರು

ಕುರಿ ಸಾಕಾಣಿಕೆ ಮಾಡಿಕೊಂಡೇ 9 ಮಕ್ಕಳಿಗೆ ಮದುವೆ ಮಾಡಿ ಜೀವನದಲ್ಲಿ ಆರ್ಥಿಕವಾಗಿ ನೆರವು ನೀಡಿದಗೌಸಿಯಾನಗರದ ಮುಸ್ತಫಾ ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂ ರನ್ನ ಕಳೆದುಕೊಂಡರು.

ಮಕ್ಕಳಿಗೆ ಮದುವೆ ಮಾಡಿದ್ದರಿಂದ ಒಂಟಿ ಜೀವನ ಸಾಗಿಸುತ್ತಿದ್ದರು. ಇಳಿ ವಯಸ್ಸಿನಲ್ಲಿ ಸಾಥ್ ಬೇಕು ಎಂದು ಮನಸ್ಸು ಕೇಳಿದೆ ತನಗೊಂದು ಜೊತೆಗಾತಿ ಬೇಕು ಎಂದು ನಿರ್ಧರಿಸಿದ ಮುಸ್ತಫಾಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ ಕಣ್ಣಿಗೆ ಬಿದ್ದಿದ್ದಾರೆ.

ತನಗೆ ಜೊತೆಗಾತಿಯಾಗುವಂತೆ ಮುಸ್ತಫಾ ಬೇಡಿಕೆ ನಿರಾಕರಿಸದ ಫಾತಿಮಾ ಬೇಗಂ ಒಪ್ಪಿಕೊಂಡರು

ಮುಸ್ತಫಾ ರವರ ಇಡೀ ಕುಟುಂಬ
ತಂದೆಯ ನಿರ್ಧಾರವನ್ನು ಸ್ವಾಗತಿಸಿ ನಿಖಾಗೆ ದಿನಾಂಕ ಫಿಕ್ಸ್ ಮಾಡಿದ್ದಾರೆ.

ಗೌಸಿಯಾನಗರದ ತಮ್ಮ ಮನೆಯಲ್ಲಿ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ‌ ಮುಸ್ತಫಾ ರವರು ಫಾತಿಮಾಬೇಗಂ ರನ್ನ ವರಿಸಿದ್ದಾರೆ. ಇಳಿ ವಯಸ್ಸಿನಲ್ಲಿ ತನಗೊಂದು ಆಸರೆ ಬೇಕೆಂದು ಬಯಸಿದ ಮುಸ್ತಫಾ ಆಸೆಯನ್ನು ಫಾತಿಮಾ ಬೇಗಂ ಈಡೇರಿಸಿದ್ದಾರೆ.

Share This Article
Leave a comment