March 16, 2025

Newsnap Kannada

The World at your finger tips!

KSRTC,Bus,Rain

Nagamangala KSRTC Bus Stand Flooded - More than 20 buses submerged ನಾಗಮಂಗಲ KSRTC ಬಸ್ ನಿಲ್ದಾಣ ಜಲಾವೃತ- 20ಕ್ಕೂ ಹೆಚ್ಚು ಬಸ್‍ಗಳು ಮುಳುಗಡೆ

ನಾಗಮಂಗಲ KSRTC ಬಸ್ ನಿಲ್ದಾಣ ಜಲಾವೃತ- 20ಕ್ಕೂ ಹೆಚ್ಚು ಬಸ್‍ಗಳು ಮುಳುಗಡೆ

Spread the love

ಮಹಾಮಳೆಗೆ ಸಕ್ಕರೆ ನಾಡು ಮಂಡ್ಯ ಕೂಡ ತತ್ತರಿಸಿದೆ. ನಾಗಮಂಗಲ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡಿದೆ.

WhatsApp Image 2022 08 30 at 1.27.37 PM

ಸತತ ಮಳೆಗೆ ಬಸ್ ನಿಲ್ದಾಣವೇ ಕೆರೆಯಂತಾಗಿದೆ. 20ಕ್ಕೂ ಅಧಿಕ ಬಸ್‍ಗಳು ನೀರಿನಲ್ಲಿ ಮುಳುಗಿ ಹೋಗಿವೆ. ಡಿಪೋದಲ್ಲಿರುವ ಕೆಎಸ್‍ಆರ್‌ಟಿಸಿ ಕಚೇರಿಯೂ ಮುಳುಗಡೆಯಾಗಿದ್ದು, ಸಿಬ್ಬಂದಿ ತೆಪ್ಪದಲ್ಲಿ ಕಡತಗಳನ್ನು ಹೊತ್ತುತಂದಿದ್ದಾರೆ.ಇದನ್ನು ಓದಿ-ಭಾರತದ ಗೌತಮ್ ಅದಾನಿ ಈಗ ವಿಶ್ವದ 3 ನೇ ಶ್ರೀಮಂತ

ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಂಷಾ ನದಿ ಭೋರ್ಗರೆದು ಹರಿಯುತ್ತಿದೆ. ನದಿಯ ಭೋರ್ಗರೆತಕ್ಕೆ ಮಂಡ್ಯ ಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನ ಮುಂಭಾಗವಿರುವ ಮದ್ವವನ ಕೂಡ ಕೊಚ್ಚಿ ಹೋಗಿದೆ. ಅಲ್ಲದೆ ಇದೀಗ ಮತ್ತಷ್ಟು ಭಾಗ ಕುಸಿಯುವ ಭೀತಿಯಲ್ಲಿದೆ.

Copyright © All rights reserved Newsnap | Newsever by AF themes.
error: Content is protected !!