ಖ್ಯಾತ ವಿಮರ್ಶಕ, “ಗಾಂಧಿ ಕಥನ” ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆದಿದ್ದ, ನೇರ ನುಡಿ ಸಾಹಿತಿ ಡಿಎಸ್ ನಾಗಭೂಷಣ(70) ಕಳೆದ ತಡರಾತ್ರಿ ಅನಾರೋಗ್ಯದಿಂದ ನಿಧನರಾದರು.
ಇಂದು ಸಂಜೆ 4 ಗಂಟೆಗೆ ಶಿವಮೊಗ್ಗದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಕಲ್ಲಹಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
“ಹೊಸ ಮನುಷ್ಯ” ಪತ್ರಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ನಾಗಭೂಷಣ ಅವರು, ರೂಪರೂಪಗಳನು ದಾಟಿ, ವಿಧವಿಧ, ಇಂದಿಗೆ ಬೇಕಾದ ಗಾಂಧಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಈ ಕೃತಿಗಳು ನಿಷ್ಠೂರ ವಿಮರ್ಶೆಯ ಧ್ವನಿಯಾಗಿದ್ದವು.
ಇದನ್ನು ಓದಿ : ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ, ಪ್ರಾಣ ಬಿಟ್ಟ ಮುದ್ದಿನ ಶ್ವಾನ
ಶ್ರೀಮತಿ ಸವಿತಾ ನಾಗಭೂಷಣ ಸಹ ಕನ್ನಡದ ಖ್ಯಾತ ಲೇಖಕಿ ಮತ್ತು ಕವಿಯಾಗಿದ್ದಾರೆ. ಸುಮಾರು 20 ವರ್ಷದ ಹಿಂದೆ ನಾಗಭೂಷಣರು ಆಕಾಶವಾಣಿಯ ಕೆಲಸದಿಂದ ಸ್ವಯಂನಿವೃತ್ತಿ ಪಡೆದ ಮೇಲೆ ದಂಪತಿಗಳು ಶಿವಮೊಗ್ಗದಲ್ಲಿ ವಾಸವಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು