ನಾಗರಹಾವಿನಿಂದ ಯಜಮಾನನ ಪ್ರಾಣ ಉಳಿಸಿ, ಪ್ರಾಣ ಬಿಟ್ಟ ಮುದ್ದಿನ ಶ್ವಾನ

Team Newsnap
1 Min Read

ಯಜಮಾನನಿಗೆ ಪ್ರಾಣ ಕಂಟಕವಾಗಿದ್ದ ನಾಗರಹಾವಿನೊಂದಿಗೆ ದಿಟ್ಟತನದಿಂದ ಹೋರಾಡಿ ಹಾವನ್ನೂ ಕೊಂದು ಕೊನೆಗೆ ತನ್ನ ಪ್ರಾಣವನ್ನೂ ಸಮರ್ಪಿಸಿದ ಹೃದಯ ವಿದ್ರಾವಕ ಘಟನೆ ಕೋಲಾರ ಜಿಲ್ಲೆಯಲ್ಲಿ ಜರುಗಿದೆ.

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಮನೆಯಲ್ಲಿ ಸಾಕಿದ್ದ ನಾಯಿ. ಅಮೇರಿಕನ್ ಬುಲ್ ತಳಿಯ 3 ವರ್ಷದ ಹೆಣ್ಣು ಶ್ವಾನ ಇದಾಗಿದ್ದು ಮನೆಯ ಮಂದಿಯ ಅಕ್ಕರೆಯ ಮುದ್ದಿನ ಮಗುವಿನಂತಿತ್ತು.

ತೋಟದ ಮನೆ ಬಳಿ ಮಾಲೀಕ ವಿಲಾಸ್ ಮೊಬೈಲ್‍ನಲ್ಲಿ ಮಾತನಾಡುತ್ತಾ ಹೊರಗೆ ಬಂದು ಮನೆಯಂಗಳದಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ನಡುವೆ ನಡೆದಾಡುತ್ತಿದ್ದರು. ಈ ವೇಳೆ ನಾಯಿಯೂ ಸಹ ತನ್ನ ಯಜಮಾನನ್ನು ಹಿಂಬಾಲಿಸುತ್ತಿತ್ತು. ಅಷ್ಟರಲ್ಲಿ ಹುಲ್ಲಿನ ಮರೆಯಲ್ಲಿ ಮಲಗಿದ್ದ ನಾಗರ ಹಾವೊಂದು ದಿಟ್ಟನೆ ಹೆಡೆ ಎತ್ತಿ, ಬುಸುಗುಟ್ಟಿ ನಿಂತು, ಇನ್ನೇನು ಕಚ್ಚಲು ಸಜ್ಜಾಗಿತ್ತು. ಅಪಾಯದ ಸುಳಿವು ಅರಿತ ಶ್ವಾನವು ತಕ್ಷಣವೇ ಮುನ್ನುಗ್ಗಿ ಯಜಮಾನನ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದು ಎಸೆದಿದೆ.

ಇದನ್ನು ಓದಿ :ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟ – ಸಚಿವ ನಾಗೇಶ್ ಘೋಷಣೆ

ನಾಯಿಯೂ ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದಾಗ ನರಳಿದ ನಾಗರ, ತನ್ನ ದೇಹವನ್ನು ಶ್ವಾನದ ಕೊರಳಿಗೆ ಸುತ್ತಿ ಬಿಗಿ ಹಿಡಿದಿದೆ. ಅಲ್ಲದೆ ಹಾವು ಅದರ ನಾಲಿಗೆ ಹಾಗೂ ಮುಖಕ್ಕೆ ಕಚ್ಚಿದೆ. ಇದರಿಂದ ಕೆರಳಿದ ಶ್ವಾನವು ನಾಗರನ ಕುತ್ತಿಗೆ ಸೀಳಿ ಕೊಂದು ಹಾಕಿದೆ. ಇದಾದ ಬಳಿಕ ಕೊರಳಿಗೆ ಸುತ್ತಿಕೊಂಡಿದ್ದ ಹಾವಿನ ಮೃತದೇಹವನ್ನು ಬಿಡಿಸಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಶ್ವಾನವು ಮೃತಪಟ್ಟಿದೆ.

Share This Article
Leave a comment