ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿದ್ದ ನಾಗನಿಗೆ ಗ್ಯಾಂಗ್ರಿನ್: ಎರಡೂ ಕಾಲು ಕಟ್ ಮಾಡುವಷ್ಟು ಉಲ್ಬಣ

Team Newsnap
1 Min Read

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ವಿಕೃತ ಪ್ರೇಮಿ ನಾಗೇಶ್ ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಜೊತೆಗೆ ಗ್ಯಾಂಗ್ರಿನ್ ಕಾಯಿಲೆಯಿಂದಲೂ ಈಗ ಬಳಲುತ್ತಿದ್ದಾನೆ. ಎರಡು ಕಾಲುಗಳನ್ನು ಕಟ್ ಮಾಡುವ ಹಂತಕ್ಕೂ ಬಂದಿದೆ.

ತಾನು ಪ್ರೀತಿಸಿದ ಯುವತಿ ತನಗೆ ಸಿಗಲಿಲ್ಲ. ಹೀಗಾಗಿ ಆಕೆ ಬೇರೆ ಯಾರಿಗೂ ಸಿಗಬಾರದು ಅಂತಾ ಈತ ಆಕೆಯ ಮುಖಕ್ಕೆ ಆ್ಯಸಿಡ್ ಎರಚಿದ್ದ. ಕಡೆಗೆ ತಮಿಳುನಾಡಿನ ದೇವಸ್ಥಾನದಲ್ಲಿ ಸ್ವಾಮೀಜಿಯ ವೇಷಭೂಷಣ ತೊಟ್ಟು ತಲೆಮರೆಸಿಕೊಂಡಿದ್ದ. ಕಾಮಾಕ್ಷಿ ಪಾಳ್ಯ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧನ ಮಾಡಿದ್ದರು.

ಜೈಲಿನಲ್ಲಿರುವ ಆ್ಯಸಿಡ್ ನಾಗನಿಗೆ ಇದೀಗ ಗ್ಯಾಂಗ್ರೀನ್ ಆಗಿದೆ ಚಿಕಿತ್ಸೆ ಸರಿಯಾಗಿ ಸಿಗದೇ ಬಳಲುತ್ತಿದ್ದಾನೆ. ಆರೋಪಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಿಸಲು ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Share This Article
Leave a comment