ಮಂಡ್ಯಕ್ಕೆ ಮೈತ್ರಿ ಅಭ್ಯರ್ಥಿ ಎಚ್ ಡಿಕೆ ಘೋಷಣೆ : ಜೆಡಿಎಸ್ ನ ಉಳಿದ ಎರಡು ಸ್ಥಾನಗಳೂ ಪ್ರಕಟ

Team Newsnap
1 Min Read

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳು ಆಖೈರು ಮಾಡಲಾಗಿದೆ.

ಮಂಡ್ಯದಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಸನದಿಂದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಕೋಲಾರದಿಂದ ಮಲ್ಲೇಶ್‌ ಬಾಬು ಕಣಕ್ಕೆ ಇಳಿಯಲಿದ್ದಾರೆ.

ಪ್ರಜ್ವಲ್‌ ರೇವಣ್ಣ ಸ್ಪರ್ಧೆಯನ್ನು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅಂತಿಮಗೊಳಿಸಿದ್ದರು. ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ ಹಿಂದೆಯೇ ಖಚಿತವಾಗಿದ್ದರೂ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ.

ಹಾಸನದಲ್ಲಿ ಹೆಚ್‌ಡಿ ದೇವೇಗೌಡರು ಪ್ರಜ್ವಲ್‌ ರೇವಣ್ಣ ಹಾಸನದಿಂದ, ಮಲ್ಲೇಶ್‌ ಬಾಬು ಕೋಲಾರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಸಿದ್ದರು.

ಮಲ್ಲೇಶ್ ಬಾಬು ಅವರು ಈ ಬಾರಿ ಬಂಗಾರಪೇಟೆಯಿಂದ ಕಣಕ್ಕೆ ಇಳಿದು ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಮುಂದೆ ಸೋತಿದ್ದರು. ಪ್ರಜ್ವಲ್‌ ರೇವಣ್ಣ 2019ರ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಈಗ ಎರಡನೇ ಬಾರಿ ಕಣಕ್ಕೆ ಇಳಿಯುತ್ತಿದ್ದಾರೆ.ಮಂಡ್ಯ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ರಾ ಸಿ ಸಿದ್ದರಾಜುಗೌಡ ನೇಮಕ

ಹೆಚ್‌ಡಿ ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಹೊಸದೆನಲ್ಲ. ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋತಿದ್ದರು.

Share This Article
Leave a comment