ಮೈಸೂರು ರೈಲು ವಸ್ತು ಸಂಗ್ರಹಾಲಯವು ಅಚ್ಚರಿಯ ಸಂದರ್ಶಕನನ್ನು ಬರಮಾಡಿಕೊಂಡಿದೆ.
ಚೌಕಳಿಯ ಕೋಟ್ ಮತ್ತು ಗೊಂದಲದ ಮುಖಭಾವ ಹೊಂದಿರುವ ವ್ಯಕ್ತಿಯೊಬ್ಬರು ಈ ದಿನಗಳಲ್ಲಿ ರೈಲು ಸಂಗ್ರಹಾಲಯದಲ್ಲಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಹೆಚ್ಚು ಇಷ್ಟವಾಗುವ ಮತ್ತು ನಿರಂತರವಾಗಿ ಅನುಸರಿಸಲ್ಪಡುವ, ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ರವರು ಸೃಷ್ಟಿಸಿ ಅಜರಾಮರಗೊಳಿಸಿದ ವಿಡಂಬನ ಚಿತ್ರಪಾತ್ರ ‘ಕಾಮನ್ ಮ್ಯಾನ್’ (ಸಾಮಾನ್ಯ ಮನುಷ್ಯ). ಈ ಪಾತ್ರವು ಎಲ್ಲಾ ವಯಸ್ಸಿನ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ.
ಮೈಸೂರು ವಿಭಾಗವು ಪ್ರಸಿದ್ಧ ವಿಡಂಬನ ಪಾತ್ರದ ಜೀವನ ಗಾತ್ರ ಶಿಲ್ಪವನ್ನು ರೈಲು ಸಂಗ್ರಹಾಲಯದ ಆವರಣದಲ್ಲಿ ಸ್ಥಾಪಿಸಿದೆ. ಇದು ವಿಭಾಗದ ಮತ್ತೊಂದು ನವೀನ ಉಪಕ್ರಮವಾಗಿದೆ. ಭಾರತದಲ್ಲಿ ರೈಲ್ವೆಯೆಂದರೆ ಸಾಮಾನ್ಯ ಮನುಷ್ಯನ ಆಶಯ ಮತ್ತು ಆಕಾಂಕ್ಷೆಗಳಿಗಾಗಿಯೇ ಇದೆ.
ಈ ಅಪ್ರತಿಮ ಪಾತ್ರವನ್ನು ಸಂಗ್ರಹಾಲಯದಲ್ಲಿ ಸ್ಥಾಪಿಸುವುದು ಸಾಮಾನ್ಯ ಜನರೊಂದಿಗೆ ರೈಲ್ವೆಯ ಸಂಪರ್ಕವನ್ನು ಆಚರಿಸುವ ಒಂದು ಮಾರ್ಗವಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಅಪರ್ಣ ಗರ್ಗ್ ರವರು ಹೇಳಿದ್ದಾರೆ.
ದಂತಕತೆಯಾದ ಆರ್.ಕೆ. ಲಕ್ಷ್ಮಣ್ ರವರು ಮೈಸೂರಿನಲ್ಲಿ ಜನಿಸಿದರು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ‘ಕಾಮನ್ ಮ್ಯಾನ್’ ಪಾತ್ರವು 1951 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇದು ಸ್ವತಂತ್ರ ಭಾರತದಲ್ಲಿ ರೈಲ್ವೆಯ ಪ್ರಯಾಣದೊಂದಿಗೆ ಹೊಂದಿಕೆಯಾಗುತ್ತದೆ. ನಗರದಿಂದ ಬಂದ ಸೃಷ್ಟಿಕರ್ತನ ಸೃಜನಶೀಲ ಪ್ರತಿಭೆಗೆ ಇದು ಒಂದು ಸಣ್ಣ ಗೌರವ ಹಾಗೂ ರೂಪಾಂತರಗೊಂಡ ರೈಲು ವಸ್ತುಸಂಗ್ರಹಾಲಯಕ್ಕೆ ಮತ್ತೊಂದು ಅನನ್ಯ ಆಕರ್ಷಣೆಯನ್ನು ಸೇರಿಸುತ್ತದೆ.
ಈ ಜೀವನ ಗಾತ್ರದ ಆವೃತ್ತಿಯನ್ನು ಕೆತ್ತಲು ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಎಂಬುವವರು ಶಿಲ್ಪಕಲೆಯ ಸೃಷ್ಟಿ ಕರ್ತರು.
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ