ನ್ಯಾಯಾಲಯದ ಮೊರೆ ಹೋದ ಬಿ ಶರತ್ : ರೋಹಿಣಿಗೆ ಸಂಕಷ್ಟ?

Team Newsnap
1 Min Read
Pic Credits : Sai Ram

ದಿಢೀರ್ ವರ್ಗಾವಣೆಗೊಂಡ ಮೈಸೂರು ಜಿಲ್ಲಾಧಿಕಾರಿ ಬಿ. ಶರತ್, ತಮ್ಮ ವರ್ಗಾವಣೆಯ ನಿರ್ಧಾ ರ ವಿರೋಧಿಸಿ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಯಾವುದೇ ಸಕಾರಣವಿಲ್ಲದೇ ತಮ್ಮನ್ನು ಕೇವಲ ಒಂದು ತಿಂಗಳಲ್ಲಿ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರದ ವಿರುದ್ಧ ಬಿ. ಶರತ್ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.

ಶರತ್ ಅವರ ಈ ನಿರ್ಧಾರದಿಂದ ರಾಜ್ಯ ಸರ್ಕಾರ ಕ್ಕೆ ಮುಜುಗರ ಉಂಟಾಗಿದೆ. ಅಲ್ಲದೇ ನ್ಯಾಯಾಲಯವು ಕೂಡ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಇದರಿಂದಾಗಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಾಲಯವು ಅ. 6 ರಂದು ಮತ್ತೆ ವಿಚಾರಣೆ ನಡೆಸಲಿದೆ.
ಬಿ. ಶರತ್ ನ್ಯಾಯಾಲಯಕ್ಕೆ ಹೋದ ನಿರ್ಧಾರದಿಂದ ಸರ್ಕಾರ ಕ್ಕೆ ಮುಖಭಂಗವಾಗುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ರೋಹಿಣಿ ಸಿಂಧೂರಿ ದಾಸರಿ ಈಗಾಗಲೇ ಮೈಸೂರು ಡಿಸಿ ಯಾಗಿ ಕೆಲಸ ಮಾಡುತ್ತಿದ್ದಾರೆ.

ಒಂದು ವೇಳೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯವು ಶರತ್ ವರ್ಗಾವಣೆಗೆ ತಡೆಯಾಜ್ಞೆ ನೀಡಿದರೆ ಪುನಃ ಮೈಸೂರು ಜಿಲ್ಲಾಧಿಕಾರಿಗಳಾಗಿ ನೇಮಕವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.

ಈ ನಡುವೆ ರಾಯಚೂರಿನಲ್ಲಿ ಬುಧವಾರ ಬೋವಿ ಜನಾಂಗದವರು ಪ್ರತಿಭಟನೆ ಮಾಡಿ, ಬಿ. ಶರತ್ ವರ್ಗಾವಣೆಯನ್ನು ಖಂಡಿಸಿದ್ದಾರೆ. ರಾಯಚೂರು ಹಾಗೂ ಕಲಬುರ್ಗಿ ಯಲ್ಲಿ ಪ್ರಾಮಾಣಿಕ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ ಶರತ್ ಅವರನ್ನು ಕೇವಲ ಒಂದು ತಿಂಗಳಲ್ಲೇ ವರ್ಗಾವಣೆ ಮಾಡಿರುವ ಕ್ರಮವನ್ನು ಖಂಡಿಸಿ ರಾಯಚೂರು ಡಿಸಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಶರತ್ ದಿಢೀರ್ ವರ್ಗಾವಣೆ ಖಂಡಿಸಿ ಮಂಡ್ಯದಲ್ಲಿ ದಸಂಸ ದವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕೈವಾಡದಿಂದ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ ಎಂದು ದಸಂಸ ಮುಖಂಡರು ದೂರಿದ್ದಾರೆ.

Share This Article
Leave a comment