ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಪೋಟ ಪ್ರಕರಣ : ಅನುಮಾನಸ್ಪದ ವಸ್ತುಗಳು ಪತ್ತೆ – ಉಗ್ರ ಕೃತ್ಯ DGP

Team Newsnap
1 Min Read

ಮಂಗಳೂರಿನ ಕಂಕನಾಡಿ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಇದೊಂದು ಕೃತ್ಯ ಎಂದು ಡಿಜಿಪಿ ಪ್ರವೀಣ್ ಸೂದ್ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕಾಗಿದೆ. ಆಟೋದಲ್ಲಿ ಅನುಮಾನಸ್ಪದ ವಸ್ತುಗಳು ಪತ್ತೆಯಾಗಿವೆ.ಪಾಂಡವಪುರದಲ್ಲಿ ನ. 25, 26, 27 ರಂದು ಪುನೀತೋತ್ಸವ: ಶಾಸಕ ಸಿ.ಎಸ್.ಪುಟ್ಟರಾಜು

ಶನಿವಾರ ಸಂಜೆ ನಾಗುರಿ ಸಮೀಪ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ವಸ್ತುವೊಂದು ಸ್ಪೋಟಗೊಂಡು ರಿಕ್ಷಾ ಚಾಲಕ ಪುರುಷೋತ್ತಮ ಹಾಗೂ ಅಪರಿಚಿತ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು.

ಸ್ಪೋಟಕ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆಟೋದಲ್ಲಿ ಎರಡು ಬ್ಯಾಟರಿ, ನಟ್ಟು, ಬೋಲ್ಟ್ ಪತ್ತೆ ಹಚ್ಚಿದ್ದಾರೆ.

ಸರ್ಕ್ಯೂಟ್ ರೀತಿಯ ವೈರಿಂಗ್ ಮಾಡಿರುವ ವಸ್ತುಗಳು ಪತ್ತೆಯಾಗಿದೆ, ಲಘು ತೀವ್ರ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ ವಸ್ತುಗಳನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ ತಂಡಕ್ಕೆ ಕಳುಹಿಸಲಾಗಿದೆ.

ಇದೊಂದು ಉಗ್ರ ಕೃತ್ಯ. ಇದು ಆಕಸ್ಮಿಕ ಕೃತ್ಯವಲ್ಲ. ದೊಡ್ಡ ಅನಾಹುತ ಉಂಟು ಮಾಡುವ ಉದ್ದೇಶ ಈ ಸ್ಫೋಟದಲ್ಲಿ ಅಡಗಿದೆ. ಉಗ್ರ ಸಂಘಟನೆಯ ಕೈವಾಡದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಡಿಜಿಪಿ ಟ್ವಿಟ್ ನಲ್ಲಿ ತಿಳಿಸಿದ್ದಾರೆ.

Share This Article
Leave a comment