December 19, 2024

Newsnap Kannada

The World at your finger tips!

road,repair,mysore

Mysore's Irvine road widening work is smooth: The mosque wall which was an obstacle has been cleared

ಮೈಸೂರಿನ ಇರ್ವಿನ್ ರಸ್ತೆ ವಿಸ್ತರಣೆ ಕಾಮಗಾರಿ ಸುಗಮ:ಅಡ್ಡಿಯಾಗಿದ್ದ ಮಸೀದಿ ಗೋಡೆ ತೆರವು

Spread the love

ಮೈಸೂರಿನ ಹೃದಯ ಭಾಗದಲ್ಲಿರುವ ಇರ್ವಿನ್ ರಸ್ತೆಯ ಕೆಲ ಭಾಗದ ಅಗಲೀಕರಣಕ್ಕೆ ಹಲವು ವರ್ಷಗಳಿಂದ ಎದುರಾಗಿದ್ದ ಸಮಸ್ಯೆಗೆ ಕಡೆಗೂ ಪರಿಹಾರ ಸಿಕ್ಕಿದೆ.

ಶೇಖಡ 95ರಷ್ಟು ಕಾಮಗಾರಿ ಮುಗಿದಿದ್ದರೂ, ಕೆಲ ವಾಣಿಜ್ಯ ಕಟ್ಟಡಗಳು ಮತ್ತು ವಿವಾದಿತ ಮಸೀದಿಯ ಗೋಡೆಗಳ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಆದರೆ, ಹೈಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಇದೀಗ ಮಸೀದಿ ಹಾಗೂ ವಾಣಿಜ್ಯ ಕಟ್ಟಡಗಳ ಗೋಡೆ ತೆರವು ಕಾರ್ಯಾಚರಣೆ ಆರಂಭವಾಗಿದೆ.ಇದನ್ನು ಓದಿ –ಸೋನಿಯಾ ಗಾಂಧಿ ಮತ್ತೆ ಕೊರೊನಾ ಪಾಸಿಟಿವ್ : ಐಸೋಲೇಟ್

ಗುರುವಾರ ರಾತ್ರಿಯಿಂದಲೇ ಗೋಡೆ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಅಧಿಕಾರಿಗಳು ಆರಂಭಿಸಿದ್ದಾರೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರೊಂದಿಗೆ ರಸ್ತೆ ವಿಸ್ತರಣೆಗೆ ಎದುರಾಗಿದ್ದ ಸಣ್ಣ ಅಡೆ ತಡೆ ಕೊನೆಗೂ ನಿವಾರಣೆಯಾಗಿದೆ.

ಇರ್ವಿನ್ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದಲೂ ಪ್ರಯತ್ನ ನಡೆದಿತ್ತು. ಆದರೆ ಈ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಯನ್ನು ಒಡೆಯಲು ತಡೆಯಾಜ್ಞೆ ಇದ್ದ ಕಾರಣ ಇಷ್ಟು ವರ್ಷಗಳವರೆಗೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ವಿಚಾರ ಹಲವು ರಾಜಕೀಯ ಮೇಲಾಟಕ್ಕೂ ಕೂಡ ಕಾರಣವಾಗಿತ್ತು. ನಾಯಕರ ನಡುವೆ ವಾಕ್ಸಮರಕ್ಕೆ ಸಾಕ್ಷಿಯಾಗಿತ್ತು.

ಕಾಮಗಾರಿ ವಿರೋಧಿಸಿ ಮಸೀದಿ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲನ್ನು ಸಹ ಏರಿತ್ತು. ಹಲವು ಬಾರಿ ಸಂಧಾನ ಪ್ರಕ್ರಿಯೆ ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಬದಲಾದ ಸನ್ನಿವೇಶದಲ್ಲಿ ನಿರಂತರ ಕಾನೂನು ಸಮರವೂ ಕೂಡ ನಡೆದಿತ್ತು.ಇದೀಗ ಕೊನೆಗೂ ತಾರ್ಕಿಕ ಪರಿಹಾರ ಸಿಕ್ಕಿದ್ದು, ತಡೆಗೋಡೆ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ.

Copyright © All rights reserved Newsnap | Newsever by AF themes.
error: Content is protected !!