November 5, 2024

Newsnap Kannada

The World at your finger tips!

WhatsApp Image 2022 12 10 at 5.01.01 PM

ಶಾಸಕ ಪುಟ್ಟರಾಜು ಬೆದರಿಕೆಗೆ ಬೆಚ್ಚಿ ಬಿದ್ದ ಸಂಸದ – ಹಾಳಾದ ಹಳ್ಳಿಗಳ ರಸ್ತೆ ರಿಪೇರಿಗೂ ಅಸ್ತು

Spread the love

ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಯಿಂದ ಹಳ್ಳಿ ರಸ್ತೆಗಳು ಹಾಳಾಗಿವೆ ಇವುಗಳನ್ನು ಸರಿಪಡಿಸದಿದ್ದರೆ ಸಂಸದ ಪ್ರತಾಪ್ ಸಿಂಹ ಮನೆ ಮುಂದೆ ಧರಣಿ ಮಾಡುವುದಾಗಿ ಹೇಳಿದ್ದ ಮೇಲುಕೋಟೆ ಶಾಸಕ ಪುಟ್ಟರಾಜು ಎಚ್ಚರಿಕೆಗೆ ಬೆಚ್ಚಿ ಬಿದ್ದ ಸಂಸದ ಪ್ರತಾಪ್ ಸಿಂಹ ಶನಿವಾರ ಗುಂಡಿ ಬಿದ್ದಿರುವ ಹಳ್ಳಿಗಳ ರಸ್ತೆಗಳನ್ನು ವೀಕ್ಷಣೆ ಮಾಡಿ, ರಸ್ತೆಗಳ ರಿಪೇರಿ ಭರವಸೆ ನೀಡಿದರು.

ಶಾಸಕ ಪುಟ್ಟರಾಜು ಎಚ್ಚರಿಕೆ ಏನಾಗಿತ್ತು?

ಬೆಂಗಳೂರು-ಮೈಸೂರು ರಾಷ್ಟ್ರೀಯ ದಶಪಥ ಹೆದ್ದಾರಿ ಕಾಮಗಾರಿಗೆ ಮಾಡುವ ವೇಳೆ ಪಾಂಡವಪುರ, ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು ತಾಲೂಕು ವ್ಯಾಪ್ತಿಯ ಹಳ್ಳಿಗಳ ರಸ್ತೆಯಲ್ಲಿ ಮಣ್ಣು ಹಾಗೂ ಕಲ್ಲನ್ನು ಟಿಪ್ಪರ್ ಲಾರಿಗಳ ಮೂಲಕ ತೆಗೆದುಕೊಂಡು ಹೋಗಿದ್ದಾರೆ ಇದೀಗ ಈ ಭಾಗದ ರಸ್ತೆಗಳು ಗುಂಡಿ ಬಿದ್ದು ಸಂಪೂರ್ಣವಾಗಿ ಹಾಳಾಗಿವೆ. ಈ ರಸ್ತೆಗಳನ್ನು ಸರಿಪಡಿಸುವಂತೆ ಶಾಸಕ ಪುಟ್ಟರಾಜು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ . ಸಂಸದ ಪ್ರತಾಪ್ ಸಿಂಹ ಗಮನಕ್ಕೆ ತರಲು ಪುಟ್ಟರಾಜು ಪ್ರಯತ್ನಿಸಿದಾಗ ಪ್ರತಾಪ್ ಸಿಂಹ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಶಾಸಕ ಪುಟ್ಟರಾಜು ರಸ್ತೆಗಳನ್ನು ಸರಿಪಡಿಸುವ ಕಡೆ ಗಮನ ಕೊಡಲಿಲ್ಲ ಎಂದರೆ ನಾನು ಪ್ರತಾಪ್ ಸಿಂಹ ಮನೆ ಎದುರು ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಸಿಎಂ, ತಜ್ಞರ ಜೊತೆ ಚರ್ಚಿಸಿ ಸಲಾಂ ಆರತಿ ಹೆಸರು ಬದಲಾವಣೆ: ಸಚಿವೆ ಜೊಲ್ಲೆ

ಪುಟ್ಟರಾಜು ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಸಂಸದರು, ಶನಿವಾರ ಶಾಸಕ ಪುಟ್ಟರಾಜು ಜೊತೆಗೂಡಿ ಅಧಿಕಾರಿಗಳೊಂದಿಗೆ ಹಾಳಾಗಿರುವ ರಸ್ತೆಗಳನ್ನು ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ಒಂದು ಹೆದ್ದಾರಿಗಾಗಿ ಹಳ್ಳಿಗಳ ರಸ್ತೆ ಮಾಡಿದರೆ ಅದು ಶ್ರೇಯವಾಗುವುದಿಲ್ಲ. ಹಾಳಾಗಿರುವ ರಸ್ತೆಗಳನ್ನು ಆದಷ್ಟು ಬೇಗ ಸರಿಪಡಿಸುತ್ತೇವೆ. ಪುಟ್ಟರಾಜು ಅವರು ಸಹ ಅಭಿವೃದ್ಧಿ ಪರವಾಗಿ ಇದ್ದಾರೆ, ಅವರ ಮಾತಿನಂತೆ ಇಂದು ನಾನು ಬಂದಿದ್ದೇನೆ. ಹೆದ್ದಾರಿ ಕಾಮಗಾರಿಯಿಂದ ಯಾವ ಯಾವ ರಸ್ತೆಗಳು ಹಾಳಾಗಿವೆ ಅವುಗಳನ್ನು ಸರಿಪಡಿಸುತ್ತೇವೆ ಎಂಬ ಭರವಸೆಯನ್ನು ಸಂಸದ ಸಿಂಹ ನೀಡಿದರು

ರಸ್ತೆ ರಿಪೇರಿ ಮಾಡದಿದ್ದರೆ ಮತ್ತೆ ಹೋರಾಟದ ಹಾದಿ:

ಮೈಸೂರು – ಬೆಂಗಳೂರು ಹೆದ್ದಾರಿ ಕಾಮಗಾರಿಯಿಂದ ಹಳ್ಳಿಗಾಡಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ ಯಾರೂ ಗಮನ ಕೊಡಲಿಲ್ಲ. ಹೀಗಾಗಿ ನಾನು ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ಈಗ ಪ್ರತಾಪ್ ಸಿಂಹ ನನ್ನ ಮಾತಿಗೆ ಬೆಲೆ ಕೊಟ್ಟು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಸರಿಪಡಿಸಬೇಕು, ಒಂದು ವೇಳೆ ತಡವಾದರೆ ನಾನು ಹೋರಾಟದ ಹಾದಿಯನ್ನು ಮುಂದುವರೆಸುತ್ತೇನೆ.

  • ಸಿ ಎಸ್ ಪುಟ್ಟರಾಜು
    ಶಾಸಕರು , ಮೇಲುಕೋಟೆ ಕ್ಷೇತ್ರ
Copyright © All rights reserved Newsnap | Newsever by AF themes.
error: Content is protected !!