ಮೈಸೂರು ದಸರಾದ ವೈಶಿಷ್ಟ್ಯಗಳಲ್ಲಿ ದೀಪಾಲಂಕಾರವೂ ಒಂದು. ಆದರೆ ಕೊರೋನಾ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನು ಆದಷ್ಟು ಸರಳವಾಗಿ ಆಚರಿಸಲು ಯೋಚಿಸಿರುವ ಸರ್ಕಾರ, ದೀಪಾಲಂಕಾರವನ್ನು ದಿನಕ್ಕೆ 2 ರಿಂದ 3 ಗಂಟೆಗಳಂತೆ 10 ದಿನಕ್ಕೆ ಮಾತ್ರ ಸೀಮಿತಗೊಳಿಸಿದೆ.
ಕೋವಿಡ್ ಹಿನ್ನಲೆಯಲ್ಲಿ ಎಲ್ಲೆಡೆಯಿಂದಲೂ ವಿಜೃಂಭಣೆಯ ದಸರಾ ಬೇಡ ಎಂಬ ಕೂಗು ಕೇಳಿಬಂದಿತ್ತು. ಹೆಚ್ಚಿನ ಜನಸಂದಣಿಯಿಂದ ಕೊರೋನಾ ಸ್ಪೋಟವಾಗಬಹುದು ಎಂಬ ಮುಂದಾಲೋಚನೆ ಇದರಲ್ಲಿ ಸೇರಿಕೊಂಡಿತ್ತು. ಹಾಗಾಗಿ ರಾಜ್ಯ ಸರ್ಕಾರ ಸರಳ ದಸರಾ ಆಚರಣೆಗೆ ಒತ್ತು ಕೊಟ್ಟಿದೆ.
ದೀಪಾಲಂಕಾರದ ಕುರಿತಂತೆ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸು ಮಾಡಿದೆ. ಸಂಜೆ 7 ರಿಂದ 10 ಗಂಟೆಗಳ ವರಗೆ ಮಾತ್ರ ವಿದ್ಯುತ್ ದೀಪಾಲಂಕಾರವಿರುತ್ತದೆ. ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ದೀಪಾಲಂಕರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೇ ದೀಪಾಲಂಕಾರ ವೀಕ್ಷಣೆಯ ಸಮಯದಲ್ಲಿ ಮಾಸ್ಕ್ ಧರಿಸುವಿಕೆ, ಕೊರೋನಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ.
ಅಲ್ಲದೇ ದಸರಾ ವೀಕ್ಷಣೆಯನ್ನು ಮಾಡುವ ಜನಸಂದಣಿಗೆ ಮಿತಿ ಹೇರಿರುವ ತಜ್ಞರ ತಂಡ, ಕೇವಲ 300 ಜನಕ್ಕೆ ದಸರಾ ವೀಕ್ಷಿಸಲು ಅನುಮತಿ ನೀಡಬೇಕು, 200 ಜನ ಮಾತ್ರ ಚಾಮುಂಡಿಬೆಟ್ಟದ ದರ್ಶನ ಮಾಡಬೇಕು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಜನ ಮಾತ್ರ ಸೇರಬೇಕೆಂದು ಶಿಫಾರಸು ಮಾಡಿದೆ.
More Stories
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು