ಮೈಸೂರು ದಸರಾ: ಮತ್ತೆ ಬರಲಿವೆ ಡಬಲ್‌ ಡೆಕ್ಕರ್ ಬಸ್

Team Newsnap
1 Min Read

ಮೈಸೂರಿನಲ್ಲಿ ದಸರಾ ವೇಳೆ ಲಂಡನ್ ಮಾದರಿಯ ಡಬಲ್ ಡೆಕ್ಕರ್ ಬಸ್ ಗಳು ರಸ್ತೆಗಳಿವೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಈ ಯೋಜನೆ ಕೈಗೊಂಡಿದೆ.

ಕೊರೋನಾದಿಂದ ತತ್ತರಿಸಿರುವ ಪ್ರವಾಸೋದ್ಯಮಕ್ಕೆ ಉತ್ತೇಜ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಈಗಾಗಲೇ ೬ ಬಸ್ ಗಳನ್ನು ಖರೀದಿಸಿದ್ದಾರೆ. ಪರೀಕ್ಷಾರ್ಥ ಸಂಚಾರಕ್ಕಾಗಿ ಈಗ ದಸರಾ ಸಂದರ್ಭದಲ್ಲಿ ಒಂದು ಬಸ್ ನ್ನು ರಸ್ತೆಗಿಳಿಸಿ, ಪ್ರವಾಸಿಗರ ಪ್ರತಿಕ್ರಿಯೆಯ ಮೇಲೆ ಉಳಿದ ಬಸ್ ಗಳನ್ನು ಸಂಚಾರಕ್ಕೆ ರಸ್ತೆಗಿಳಿಸಲಿದ್ದಾರೆ.

ಬಸ್ ನ ಸೌಲಭ್ಯಗಳೇನು?
‘ಈ ಬಸ್ ಗಳು ೨೦ ಇನ್ನರ್ ಸೀಟ್ ಗಳು ಹಾಗೂ ೨೦ ಓಪನ್ ಸೀಟ್ ಗಳನ್ನು ಹೊಂದಿವೆ. ಇನ್ನರ್ ಸೀಟ್ ಗಳಲ್ಲಿ ಟಿವಿ, ಎಸಿ ಸೌಲಭ್ಯಗಳಿರಲಿವೆ’ ಎನ್ನುತ್ತಾರೆ ಕುಮಾರ್ ಪುಷ್ಕರ್.

ನಿಗಮದ ವ್ಯವಸ್ಥಾಪಕ ಚೇತನ್ ‘ಪ್ರತಿ ಬಸ್ ಜಿಪಿಎಸ್, ಹೆಡ್ ಸೆಟ್ ಗಳನ್ನು ಒಳಗೊಂಡಿರಲಿದೆ. ಇದರಿಂದ ಪ್ರವಾಸಿಗರಿಗೆ ತಾವು ಇಳಿಯಬೇಕಾದ ಸರಿಯಾದ ನಕ್ಷೆ, ಮಾರ್ಗಗಳು ತಿಳಿಯಲಿವೆ. ಅಲ್ಲದೇ ಎಲ್ಇಡಿ ಸ್ಕ್ರೀನ್ ಗಳ ಮೂಲಕ ಸ್ಥಳದ ಚಿತ್ರಗಳನ್ನು ತೋರಿಸುವದರಿಂದ ಹಾಗೂ ಆಡಿಯೋ ಕೇಳಿಸುವದರಿಂದ ಪ್ರವಾಸಿಗರು ಗೊಂದಲಕ್ಕೆ ಒಳಗಾಗುವದಿಲ್ಲ’ ಎಂದರು.

ಈ ಬಸ್ ಗಳ ಓಡಾಟಕ್ಕೆ ರಸ್ತೆಯಲ್ಲಿ ಕನಿಷ್ಠ ೨೫ ಅಡಿ ಎತ್ತರದ ಜಾಗ ಇರಬೇಕಾಗುತ್ತದೆ. ಆದರೆ ರಸ್ತೆಗಳ ಇಕ್ಕೆಲಗಳಲ್ಲಿ ಮರಗಿಡಗಳಿರುವದರಿಂದ, ಅವುಗಳ‌ ತೆರವಿಗೆ ನಗರ ಪಾಲಿಕೆಯ ತೋಟಗಾರಿಕಾ ವಿಭಾಗದ ನಿರ್ದೇಶಕ ಮಣಿಕಂಠನ್ ನಿರ್ದೇಶನದಲ್ಲಿ‌ ಬುಧವಾರದಿಂದಲೇ ಮರಗಿಡಗಳ ರೆಂಬೆಗಳನ್ನು ಕಡಿಯುವ ಕೆಲಸ ಪ್ರಾರಂಭವಾಗಿದೆ. ಈ ಕೆಲಸಕ್ಕೆ ಸೆಸ್ಕ್, ಅರಣ್ಯ ಇಲಾಖೆ, ಪೋಲೀಸರ ಸಹಕಾರದೊಂದಿಗೆ ಭರದಿಂದ ಸಾಗಿದೆ. ಈ ಬಸ್ಸುಗಳು ಕುಕ್ಕರಳ್ಳಿ ಸಿಗ್ನಲ್ ನಿಂದ ವಿಶ್ವಮಾನವ ಜೋಡಿ ರಸ್ತೆ, ಮೆಟ್ರೋಪೋಲ್ ನಿಂದ ಡಿಸಿ ಕಛೇರಿ, ಬಸವೇಶ್ವರ ವೃತ್ತದಿಂದ ವಸಂತ ರಸ್ತೆ, ಜಿಂಜಿರ್ ಹೋಟೆಲ್ ಮುಂಭಾಗ, ಮಾನಸ ಗಂಗೋತ್ರಿ ಒಳಾವರಣ, ಚಾಮುಂಡಿ ವಿಹಾರ ಕ್ರೀಡಾಂಗಣ ಮುಂತಾದೆಡೆಗಳಲ್ಲಿ ಸಂಚರಿಸಲಿದೆ.

ಈ ಡಬಲ್ ಡೆಕ್ಕರ್ ಬಸ್ ಗಳನ್ನು ಬೆಂಗಳೂರು ಮೂಲದ ಕೆ.ಎಂ.ಎಸ್ ಬಿಲ್ಡರ್ ಸಂಸ್ಥೆ ಅಭಿವೃದ್ಧಿಪಡಿಸಿದೆ.

Share This Article
Leave a comment