ಮದಗಜದೊಂದಿಗೆ ಕಾಳಗ : ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸಾವು

Team Newsnap
1 Min Read
  • ಹಾಸನದ ಸಕಲೇಪುರ ಬಳಿ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ

  • ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿ ಕಾಳಗ 

  • ಕಾಡಾನೆ ಕಾಳಗಕ್ಕೆ ಬೀಳುತ್ತಿದ್ದಂತೆ ಮಾವುತ ಕೆಳಗೆ ಇಳಿದು ಓಡಿದ್ದಾರೆ


ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸೊಮವಾರ ಮದಗಜದೊಂದಗೆ ಕಾಳಗ ನಡೆಸಿ ಸಾವನ್ನಪ್ಪಿದ್ದಾನೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ವೇಳೆ ಹೋರಾಡಿದ ಅರ್ಜುನ ಪ್ರಾಣ ಬಿಟ್ಟಿದ್ದಾನೆ

ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ನಾಲ್ಕು ಸಾಕಾನೆಗಳೊಂದಿಗೆ ಕಾಡಾನೆಗಳ ಕಾರ್ಯಾಚರಣೆ ಆರಂಭಿಸಿತ್ತು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ದಾಳಿ
ಮಾಡಿದೆ.

ಒಂಟಿಸಲಗ ದಾಳಿ ಮಾಡುತ್ತಿದ್ದಂತೆ ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಸಾಕಾನೆ ಅರ್ಜುನ ಒಂಟಿಯಾಗಿಯೇ ಕಾಳಗಕ್ಕಿಳಿದಿದ್ದ.

ಈ ಮದಗಜಗಳ ಕಾಳಗದಲ್ಲಿ ಅರ್ಜುನ ಸಾವನ್ನಪ್ಪಿದ್ದಾನೆ. ಈ ಎರಡು ಆನೆಗಳು ಕಾಳಗಕ್ಕೆ ಬೀಳುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ.8 ಸಾವಿರ ರು ಲಂಚ ಸ್ವೀಕಾರ – ಕುಂದಗೋಳ ಬಿಇಒ ಲೋಕಾ ಬಲೆಗೆ

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a comment