ಮೈಸೂರು ದಸರಾದ ಮೊದಲ ಹಂತವಾದ ಗಜಪಯಣ ಆಗಸ್ಟ್ 7ರಂದು ಆರಂಭವಾಗಲಿದೆ.
ಮೈಸೂರು ದಸರಾ 2022ರಲ್ಲಿ ಪಾಲ್ಗೊಳ್ಳುವ ಆನೆಗಳು ನಾಗರಹೊಳೆ ಶಿಬಿರದಿಂದ ಮೈಸೂರು ಅರಮನೆಗೆ ಹೊರಡಲಿವೆ. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವಕ್ಕೆ ಅಧಿಕೃತವಾದ ಆರಂಭ ಸಿಗಲಿದೆ.ಇದನ್ನು ಓದಿ –ನಾಗಮಂಗಲ : ಎಚ್ಚರಿಕೆ ನಿರ್ಲಕ್ಷಿಸಿದ ಚಾಲಕನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋದ ಗೂಡ್ಸ್ ವಾಹನ
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೊರ ವಲಯದಲ್ಲಿರುವ ನಾಗಾಪುರ ಸಣ್ಣಗ್ರಾಮದ ಸಮೀಪವೀರುವ ವೀರನಹೊಸಹಳ್ಳಿಯಲ್ಲಿ ಭಾನುವಾರ ಬೆಳಗ್ಗೆ 9.01ರಿಂದ 9.35ರ ಮಧ್ಯದ ಶುಭ ಕನ್ಯಾ ಲಗ್ನದಲ್ಲಿ ಗಜಪಡೆಗಳ ಪಯಣ ಶುರುವಾಗಲಿದೆ.
ಗಜಪಯಣಕ್ಕೆ ಚಾಲನೆ :
ಮೈಸೂರು ದಸರಾ ಆನೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಆನೆಗಳ ಪಯಣ ಸ್ವಲ್ಪ ದೂರದವರೆಗೆ ಮೆರವಣಿಗೆ ಮೂಲಕ ಸಾಗಲಿದೆ. ನಂತರ ವೀರನಹೊಸಹಳ್ಳಿಯಿಂದ ಮೈಸೂರಿಗೆ ಲಾರಿಗಳ ಮೂಲಕ ಆನೆಗಳನ್ನು ಕರೆತರಲಾಗುತ್ತದೆ.
ಗಜಪಯಣಕ್ಕೆ ಅರಣ್ಯ ಸಚಿವ ಉಮೇಶ ಕತ್ತಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಹುಣಸೂರು ಶಾಸಕ ಎಚ್. ಪಿ. ಮಂಜುನಾಥ್ ಮತ್ತಿತರರು ಸಹ ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 7ರ ಸಂಜೆ ವೇಳೆಗೆ ಆನೆಗಳು ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಲಿವೆ. ಎರಡು ದಿನ ವಿಶ್ರಾಂತಿ ಪಡೆಯಲಿರುವ ಆನೆಗಳು ಆಗಸ್ಟ್ 10 ರಂದು ಮೈಸೂರಿನ ಅರಮನೆ ಆವರಣಕ್ಕೆ ಆಗಮಿಸಲಿವೆ.
ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ 14 ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮಗೊಳಿಸಿದ್ದಾರೆ. ಎರಡು ತಂಡಗಳಲ್ಲಿ ಆನೆಗಳು ಮೈಸೂರಿಗೆ ಆಗಮಿಸಲಿವೆ. ಮುಖ್ಯವಾಗಿ ‘ಅಭಿಮನ್ಯು’ ಹಾಗೂ ‘ಅರ್ಜುನ’ ಒಳಗೊಂಡ ಮೊದಲ ತಂಡದ ಆನೆಗಳು ಮೈಸೂರಿಗೆ ಆಗಸ್ಟ್7ಕ್ಕೆ ಆಗಮಿಸಿದರೆ ಎರಡನೇ ತಂಡದ ಆನೆಗಳು ಸೆಪ್ಟೆಂಬರ್ನಲ್ಲಿ ಆಗಮಿಸುವ ನಿರೀಕ್ಷೆ ಇದೆ.
ಅಕ್ಟೋಬರ್ 5ಕ್ಕೆ ವಿಜಯದಶಮಿ
ಎರಡು ವರ್ಷದ ನಂತರ ಮತ್ತೆ ಮೈಸೂರು ದಸರಾಕ್ಕೆ ತನ್ನ ಹಳೆಯ ಸೌಂದರ್ಯ, ಸೊಬಗು ವಿಜೃಂಭಣೆ ಸಿಗಲಿದೆ. ಈ ಬಾರಿ ಅದ್ಧೂರಿ ವಿಜಯದಶಮಿ, ಮೆರವಣಿಗೆ, ಪೂಜೆ, ಧಾರ್ಮಿಕ ಕೈಂಕರ್ಯ ಜರುಗಲಿವೆ.
2022 ಸೆಪ್ಟೆಂಬರ್ 26 ರಂದು ದಸಾರ ಪ್ರಾರಂಭವಾಗಲಿದೆ. ಜಂಬೂ ಸವಾರಿ ಅಕ್ಟೋಬರ್ 5 ರಂದು ವಿಜಯದಶಮಿಯಂದು ನಡೆಯಲಿದೆ. ಅಲ್ಲಿಯವರೆಗೆ ಅಂದರೆ ಸುಮಾರು ಎರಡು ತಿಂಗಳು ಆನೆಗಳಿಗೆ ತರಬೇತಿ ನೀಡಲಾಗುತ್ತದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ