ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ ಎಂದು ನಟಿ ಶಿಲ್ಪಾ ಶೆಟ್ಟಿ ಪೋಲಿಸರಿಗೆ ತಿಳಿಸಿದ್ದಾರೆ.
ಬಾಲಿವುಟ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ನೀಲಿ ಚಿತ್ರೀಕರಣ ಪ್ರಕರಣದಲ್ಲಿ ಪೊಲೀಸ್ ಬಂಧಿಯಾಗಿದ್ದಾರೆ. ಈ ಕುರಿತಾಗಿ ಶಿಲ್ಪಾ ಶೆಟ್ಟಿ ವಿಚಾರಣೆಗೆ ಒಳಪಟ್ಟಿದ್ದಾರೆ.
ಅಶ್ಲೀಲ ಸಿನಿಮಾ ಚಿತ್ರೀಕರಣದ ವಿಚಾರದಲ್ಲಿ ತನ್ನ ಸಹಭಾಗಿತ್ವ ಏನೂ ಇಲ್ಲ ರಾಜ್ ಕುಂದ್ರಾ ಅವರ ಹಾಟ್ ಶಾಟ್ಸ್ ಆ್ಯಪ್ ಜೊತೆ ನನಗೆ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.
ಈ ಸಿನಿಮಾಗಳಲ್ಲಿ ಯಾವ ರೀತಿ ಕಂಟೆಂಟ್ ಇರುತ್ತದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ನನ್ನ ಗಂಡ ಮಾಡಿದ್ದು ಕಾಮೋದ್ರೇಕದ ಸಿನಿಮಾಗಳು ಮಾತ್ರ. ಅವುಗಳು ಅಶ್ಲೀಲ ಸಿನಿಮಾಗಳಲ್ಲ. ಹಾಗಾಗಿ ನನ್ನ ಗಂಡ ನಿರಪರಾಧಿ ಎಂದು ಅವರು ವಾದಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಓಟಿಟಿಯಲ್ಲಿ ಶಿಲ್ಪಾ ಶೆಟ್ಟಿ ನಟನೆಯ ‘ಹಂಗಾಮಾ 2’ ಸಿನಿಮಾ ರಿಲೀಸ್ ಆಗಿದ್ದು, ಒಳ್ಳೆಯ ಚಿತ್ರ ನಿರ್ಮಾಣ ಮಾಡಲು ಕಷ್ಟಪಟ್ಟ ಚಿತ್ರತಂಡಕ್ಕೆ ಸಮಸ್ಯೆ ಆಗಬಾರದು. ಮನೆಯಲ್ಲಿ ಕೂತು ಸಿನಿಮಾ ನೋಡಿ ಎಂದು ಶಿಲ್ಪಾ ಶೆಟ್ಟಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವುದರ ಮೂಲಕ ಮನವಿ ಮಾಡಿದ್ದಾರೆ.
- ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
- ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
- ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
More Stories
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು