September 26, 2021

Newsnap Kannada

The World at your finger tips!

ನನ್ನ ಗುರು ಸೂರ್ಯನಾರಾಯಣ

Spread the love

ತೂಕಡಿಸಿ ತೂಕಡಿಸಿ ಓದುತಲಿದ್ದೆ
ಅಣ್ಣ ಸೂರಿ ತಾರಾ ತಾರಾ ಎನಲು
ಎಚ್ಚೆತ್ತು ಕೆಮ್ಮಿ ಕೆಮ್ಮಿ ತೊದಲಿದೆ
ಗದರಿ ಗದರಿ ವಿನಯದಿ ಅರುಹಿದ

ಗಮನದಿ ವಿಷಯವನು ಓದು ಓದು
ಕಲಿಯುತಿರು ಅದ ಬರೆದು ಬರೆದು
ಉಳಿವುದು ಸದಾ ನೆನಪು ನೆನಪು
ಎದುರಿಸು ಛಲದಿ ಪರೀಕ್ಷೆ ಪರೀಕ್ಷೆ

ಕದಿಯಲಾಗದು ಜ್ಞಾನದ ಸಂಪತ್ತು ಸಂಪತ್ತು
ತುಂಬಿಕೋ ಅದನು ಮನಕೆ ನೆನೆ ನೆನೆದು
ನಿನಗೆ ತರುವುದು ಸದಾ ಕೀರುತಿ ಕೀರುತಿ
ನಿರಂತರ ಎನಿಸುವೆ ನೀ ಸಜ್ಜನ ಸಜ್ಜನ

ಆಗುವೆ ನೀ ಸ್ವಾವಲಂಬಿ ಸ್ವಾವಲಂಬಿ
ಗಳಿಸುವೆ ಉನ್ನತ ಉನ್ನತ ಸ್ಥಾನಮಾನ
ನಡೆಸುವೆ ಹಂಗಿಲ್ಲದ ಜೀವನ ಜೀವನ
ಮಾಡುವೆ ಅಶಕ್ತರಿಗೆ ದಾನವ ದಾನವ

ಎಡವಿ ಎಡವಿ ಬೀಳುವ ಸಮಯದಿ
ಎಚ್ಚರಿಸಿ ಎಚ್ಚರಿಸಿ ತಿದ್ದಿ ತೀಡುವನೇ
ಸಜ್ಜನ ಗುರು ಗುರು ಆಚಾರ್ಯರು
ಅಣ್ಣನೇ ನನ್ನ ದಾರಿ ದೀವಿಗೆ ದೀವಿಗೆ

ಹೊಳೆಯುತಿರುವೆ ಇ೦ದು ಫಳ ಫಳ ಜಗದಿ
ಗಳಿಸುತಿರುವೆ ಝಣ ಝಣ ಕಾಂಚಾಣ
ನೀಡುತಿರುವೆ ಖುಷಿ ಖುಷಿಯಲಿ ದೇಣಿಗೆ
ಸ್ಮರಿಸಿ ಸ್ಮರಿಸಿ ಕೈಮುಗಿಯುವೆ ನನ್ನ ಸೂರಿಗೆ

ನನ್ನ ಗುರು ಸೂರ್ಯನಾರಾಯಣ ದಿವ್ಯಚೇತನಕ್ಕೆ ನಮೋ ನಮೋ 🙏

ಲಲಿತಾ ಕೆ ಆಚಾರ್
ನಿವೃತ್ತ ಪ್ರಾಂಶುಪಾಲರು ಬೆಂಗಳೂರು.
error: Content is protected !!