ನನ್ನ ಸ್ಪರ್ಧೆ ಲೋಕಸಭಾ ಚುನಾವಣೆಯಲ್ಲಿ ಖಚಿತ : ಸುಮಲತಾ

Team Newsnap
1 Min Read

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಈ ಬಾರಿ ಖಚಿತ ಎಂದು ಹಾಲಿ ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಹೇಳಿದ್ದಾರೆ.

ಮಂಡ್ಯ ಕ್ಷೇತ್ರ ಅಭ್ಯರ್ಥಿಯ ಬಗ್ಗೆ ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ನನ್ನ ಹೋರಾಟ ಟಿಕೆಟ್‌ಗಾಗಿ ಅಲ್ಲ , ಮಂಡ್ಯಕ್ಕೋಸ್ಕರ .

ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ ಇದೆ ಎಂದು ಮಾತನಾಡಿದರು.

ಮಂಡ್ಯದಿಂದ ಸ್ಪರ್ಧೆ ಮಾಡುತ್ತೀರಾ ? ಎಂಬ ಮಾಧ್ಯಮಗಳ ಪ್ರಶ್ನೆಗೆ ನಕ್ಕು ಉತ್ತರ ನೀಡದೇ ಹೊರಟ ಸುಮಲತಾ ಇನ್ನಷ್ಟು ಕುತೂಹಲವನ್ನು ಮೂಡಿಸಿದ್ದಾರೆ.ಸಿದ್ದರಾಮಯ್ಯ ನವರ ಅನಾರೋಗ್ಯದ ಹಿನ್ನೆಲೆ ‘ಅಧಿವೇಶನ’ ವಿಸ್ತರಣೆ ಸಾಧ್ಯತೆ

ಜೆಡಿಎಸ್‌ (JDS) ನಾಯಕರು ಏನಾದರೂ ಮಾತಾಡಬಹುದು , ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತವಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಈ ಬಾರಿ ನನ್ನ ಸ್ಪರ್ಧೆ ಖಚಿತ ಎಂದರು.

Share This Article
Leave a comment