December 26, 2024

Newsnap Kannada

The World at your finger tips!

jamir ahamad

ಸಿದ್ದರಾಮಯ್ಯಗೆ ನನ್ನ ಕ್ಷೇತ್ರ ಬಿಟ್​​ ಕೊಡ್ತೀನಿ – highest Lead ​​ನಲ್ಲಿ ಗೆಲ್ಲಿಸ್ತೀನಿ – M L A ಜಮೀರ್​

Spread the love

ಮಾಜಿ ಸಿಎಂ ಸಿದ್ದರಾಮಯ್ಯಗೆ ನನ್ನ ಕ್ಷೇತ್ರ ಬಿಟ್ಟು ಕೊಡೋಕೆ ಈಗಲೂ ಸಿದ್ಧ ಎಂದು ಕಾಂಗ್ರೆಸ್​ ಶಾಸಕ ಜಮೀರ್​​ ಅಹ್ಮದ್​​ ಹೇಳಿದರು.

ಸುದ್ದಿಗಾರರಜೊತೆ ಮಾತಾಡಿದ ಜಮೀರ್​​, ಸಿದ್ದರಾಮಯ್ಯಗಾಗಿ ಕ್ಷೇತ್ರ ಬಿಟ್ಟು ಕೊಡ್ತಿಲ್ಲ, ರಾಜ್ಯದ ಜನತೆಗಾಗಿ ತ್ಯಾಗ ಮಾಡುವೆ ಎಂದರು.

ನಾನು ಎಲ್ಲೇ ಹೋದರೂ 2013-18 ಅವಧಿಯಲ್ಲಿ ಕಾಂಗ್ರೆಸ್​ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಮಾಡಿರುವ ಕೆಲಸಗಳ ಬಗ್ಗೆ ಈಗಲೂ ರಾಜ್ಯದ ಜನ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯಕ್ಕಾಗಿ ನಾನು ನನ್ನ ಕ್ಷೇತ್ರ ಸಿದ್ದರಾಮಯ್ಯ ಸಾಹೇಬರಿಗೆ ಬಿಟ್ಟು ಕೊಟ್ಟುಹೈಎಸ್ಟ್​ ಲೀಡ್​​ನಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರ್ತೀನಿ. ಯಾರು ಊಹಿಸಲಾಗದಷ್ಟು ಭಾರೀ ಅಂತರದಿಂದ ಗೆಲ್ಲಿಸುತ್ತೇನೆ ಎಂದು ಜಮೀರ್​​ ಸವಾಲು ಹಾಕಿದರು.

Copyright © All rights reserved Newsnap | Newsever by AF themes.
error: Content is protected !!