ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ಮುಸ್ತಾಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಮಡದಿ ಆಯೇಷಾ ಹೇಳಿದ್ದಾರೆ.
ನಾನಿನ್ನೂ ಮುಸ್ತಾಫಾ ಪತ್ನಿ ಎಂದು ಹೇಳಿಕೊಂಡಿರಯವ ಆಯೇಷಾ, ಪತಿ ಮುಸ್ತಾಫಾ ತಮಗೆ ವಿಚ್ಛೇದನ ನೀಡದೇ ಪ್ರಿಯಾಮಣಿಯನ್ನು ಮದುವೆ ಆಗಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.
2013ರಲ್ಲಿ ಮುಸ್ತಾಫಾ ಮತ್ತು ಆಯೇಷಾ ಪ್ರತ್ಯೇಕವಾಗಿದ್ದರು. ದಂಪತಿಗೆ ಎರಡು ಮಕ್ಕಳಿದ್ದಾರೆ. ಪತ್ನಿಯಿಂದ ದೂರವಾದರೂ ಮುಸ್ತಾಫಾ ಆರ್ಥಿಕ ಸಹಾಯ ನೀಡುತ್ತಿದ್ದಾರೆ ಎಂದು ಗೊತ್ತಾಗಿದೆ.
ಮೊದಲ ಪತ್ನಿಯಿಂದ ದೂರವಾದ ಬಳಿಕ 2017ರಲ್ಲಿ ಪ್ರಿಯಾಮಣಿಯನ್ನು ಮುಸ್ತಾಫಾ ಮದುವೆಯಾಗಿದ್ದರು.
ಸರಳವಾಗಿ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದ ಜೋಡಿ, ಆನಂತರ ಅದ್ಧೂರಿ ಆರತಕ್ಷತೆ ಆಯೋಜಿಸಿದ್ದರು. ಆದರೆ ಪ್ರಿಯಾಮಣಿಯನ್ನು ಮದುವೆಯಾಗುವ ವೇಳೆ ಮುಸ್ತಾಫಾ ತಾವಿನ್ನೂ ಸಿಂಗಲ್ ಎಂದು ದಾಖಲಿಸಿದ್ದಾರೆ ಎನ್ನಲಾಗಿದೆ.
ಆಯೇಷಾ ವಾದ ಏನು ?
ನಾನಿನ್ನೂ ಮುಸ್ತಾಫಾ ರಾಜ್ ಪತ್ನಿಯಾಗಿದ್ದೇನೆ. ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಹ ಸಲ್ಲಿಸಿಲ್ಲ. 2017ರಲ್ಲಿ ಪ್ರಿಯಾಮಣಿ ಅವರನ್ನು ಮದುವೆಯಾಗುವಾಗ ಮುಸ್ತಾಫಾ ನ್ಯಾಯಾಲಯಕ್ಕೆ ತಾವು ಬ್ಯಾಚೂಲರ್ ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಇಬ್ಬರ ಮದುವೆ ಕಾನೂನಿನ ಪ್ರಕಾರ ಅಸಿಂಧು ಎಂದಿದ್ದಾರೆ.
ಮುಸ್ತಾಪ ಹೇಳುವುದು ಏನು ?
ಆಯೇಷಾ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮುಸ್ತಾಫಾ ರಾಜ್, ಮಕ್ಕಳು, ಪತ್ನಿಗೆ ಹಣ ನೀಡುತ್ತಿದ್ದೇನೆ. 2017ರಲ್ಲಿ ಮದುವೆಯಾದರೂ ಕೌಟುಂಬಿಕ ಹಿಂಸಾಚಾರ ಸೇರಿದಂತೆ ನನ್ನ ವಿರುದ್ಧ ಈಗ ಆರೋಪಗಳನ್ನು ಮಾಡುತ್ತಿರೋದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದು ನನ್ನಿಂದ ಹೆಚ್ಚು ಹಣ ಪಡೆದುಕೊಳ್ಳುವ ಹುನ್ನಾರ ಎಂದು ಮರು ಆರೋಪ ಮಾಡಿದ್ದಾರೆ ಎಂದು ಮುಸ್ತಫಾ ಹೇಳಿದ್ದಾರೆ.
- ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಹುಡುಕಾಟ ಸ್ಥಗಿತ
- ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ