January 28, 2026

Newsnap Kannada

The World at your finger tips!

election , politics , news

Muslim king gave land to Udupi math: Mithun Rai controversy ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜ : ಮಿಥುನ್ ರೈ ವಿವಾದ

ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜ : ಮಿಥುನ್ ರೈ ವಿವಾದ

Spread the love

ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಒಂದೊಂದು ಹೇಳಿಕೆಗಳು ಚರ್ಚಾಸ್ಪದ ವಿವಾದಾತ್ಮಕವಾಗುತ್ತಿದೆ. ಕಾಂಗ್ರೆಸ್ ಮುಖಂಡ ಹಾಗೂ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಉಡುಪಿ ಕೃಷ್ಣ ಮಠದ ಜಮೀನನ್ನು ಮುಸಲ್ಮಾನ ದೊರೆ ಧಾರವಾಹಿ ನೀಡಿದ್ದ ಎಂಬ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ.

ಮೂಡಬಿದರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ.

ಸೌಹಾರ್ದದ ಮಾತಿನ ನಡುವಿನ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಉಡುಪಿ ಶಾಸಕ ರಘುಪತಿ ಭಟ್ ತಿರುಗೇಟು ಕೊಟ್ಟಿದ್ದಾರೆ. ಅಯೋಧ್ಯೆ, ಕಾಶಿ – ಮಥುರಾದಲ್ಲಿ ನಿಮ್ಮ ಅಣ್ಣ ತಮ್ಮಂದಿರು ಏನು ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಸತ್ಯ ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ.

ಆ ಕಾಲದಲ್ಲಿ ಕೃಷ್ಣ ಮಠಕ್ಕೆ ಮುಸಲ್ಮಾನರು ಕೊಡುಗೆಗಳನ್ನು ನೀಡಿದ್ದಾರೆ, ಎಣ್ಣೆ ಬತ್ತಿ ಮತ್ತಿತರ ಪರಿಕರಗಳನ್ನು ಕೊಟ್ಟಿದ್ದಾರೆ ಎಂಬುದು ಬಾಯಿ ಮಾತಿನಲ್ಲಿದೆ. ಹಾಜಿ ಅಬ್ದುಲ್ಲಾ ಸಾಹೇಬ್ ಎಣ್ಣೆಯ ಹರಕೆ ಜನಜನಿತವಾಗಿದೆ. ಆದರೆ ಮುಸಲ್ಮಾನ ದೊರೆಯ ಜಮೀನು ಬಳುವಳಿ ವಿಚಾರ ಮಾತ್ರ ಚುನಾವಣೆಯವರೆಗೂ ಚರ್ಚೆ ಆಗುವ ಸಾಧ್ಯತೆ ಇದೆ.ಮಾ. 12 ರಂದು ಬೆಂಗಳೂರು – ಮೈಸೂರು ಸಂಚಾರ ಸಂಪೂರ್ಣ ರದ್ದು : ಪರ್ಯಾಯ ಮಾರ್ಗ ಇಲ್ಲಿದೆ

error: Content is protected !!