ಉತ್ತರ ಪ್ರದೇಶದ ಕುಶಿನಗರದಲ್ಲಿ ಭಾರತೀಯ ಜನತಾ ಪಕ್ಷ ಪರ ಪ್ರಚಾರ ನಡೆಸಿದ ಮುಸ್ಲಿಂ ವ್ಯಕ್ತಿಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಮೃತ ದುರ್ದೈವಿಯನ್ನು ಬಾಬರ್ ಅಲಿ(25) ಹೇಳಲಾಗಿದೆ
ಚುನಾವಣಾ ಸಮಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದರು. ಅಲ್ಲದೇ ಇತ್ತೀಚೆಗೆ ರಾಜ್ಯದಲ್ಲಿ ಬಿಜೆಪಿ ಗೆಲುವನ್ನು ಆಚರಿಸಿದ್ದರು. ಹೀಗಾಗಿ ಭಾನುವಾರ ಬಾಬರ್ ಅಲಿಯನ್ನು ನೆರೆಹೊರೆಯವರು ಥಳಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 20 ರಂದು ಬಾಬರ್ ಅಲಿ ಅವರನ್ನು ಕಥರ್‍ಗರ್ಹಿಯಲ್ಲಿ ಥಳಿಸಲಾಯಿತು. ನಂತರ ಅವರನ್ನು
ಲಕ್ನೋದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಭಾನುವಾರ ಬಾಬರ್ ಅಲಿ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿತ್ತು. ಆದರೆ ಅವರ ಕುಟುಂಬಸ್ಥರು ಅಂತ್ಯಕ್ರಿಯೆಯನ್ನು ಮಾಡಲು ನಿರಾಕರಿಸಿ, ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
- ರಾಜ್ಯದ ಹವಾಮಾನ ವರದಿ (Weather Report) 26-05-2022
- ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ
- ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
- ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ
- ಲವ್ ಮಾಕ್ಟೈಲ್ ನಂತರ ಲವ್ ಬರ್ಡ್ಸ್ ಆಗಿ ಮೂಡಿ ಬರುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ
More Stories
ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ
ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್ ಬಂಧನ: ಜೈಲು
ಮಂಡ್ಯದಲ್ಲಿ ಮಳೆ ಹಾನಿ ನಷ್ಟಕ್ಕೆ 2 ದಿನದೊಳಗೆ ಪರಿಹಾರ ಕೊಡಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆದೇಶ