3 ಲಕ್ಷ ಕೋಟಿ ರುಗೆ ಟ್ವಿಟರ್ ಕಂಪನಿ ಖರೀದಿಸಲು ಮುಂದಾದ ಮಾಸ್ಕ್

Team Newsnap
1 Min Read

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇತ್ತೀಚೆಗೆ ಟ್ವಿಟ್ಟರ್‌ನ ಶೇ.9.2 ಷೇರನ್ನು ಖರೀದಿಸಿದ್ದರು. ಬಳಿಕವೂ ಟ್ವಿಟರ್ ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಮಸ್ಕ್ ಇದೀಗ ಸಂಪೂರ್ಣವಾಗಿ ಕಂಪನಿಯನ್ನೇ ಖರೀದಿಸಲು ಮುಂದಾಗಿದ್ದಾರೆ.

ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್‌ನ ಮಂಡಳಿ ಸ್ಥಾನವನ್ನು ತಿರಸ್ಕರಿಸಿದ ಕೆಲವೇ ದಿಗಳಲ್ಲಿ 41 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರು) ಗೆ ಟ್ವಿಟ್ಟರ್‌ನ ಶೇ.100 ಪಾಲನ್ನು ಖರೀದಿಸುವಂತೆ ಕಂಪನಿಗೆ ಆಫರ್ ನೀಡಿದ್ದಾರೆ.

ತನ್ನ ಖರೀದಿ ನಿರ್ಧಾರವನ್ನು ಅಮೆರಿಕದ ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಕಮಿಷನ್‌ಗೆ ಮಸ್ಕ್ ತಿಳಿಸಿದ್ದಾರೆ.

ಟ್ವಿಟ್ಟರ್ ಜಗತ್ತಿನಾದ್ಯಂತ ಒಂದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ್ಯದ ವೇದಿಕೆಯಾಗಬಹುದು ಎಂಬ ಕಾರಣಕ್ಕೆ ಹೂಡಿಕೆ ಮಾಡಿದ್ದೇನೆ.

ನಾನು ಹೂಡಿಕೆ ಮಾಡಿದ ಬಳಿಕ ಕಂಪನಿ ಅಭಿವೃದ್ಧಿ ಹೊಂದುವುದಿಲ್ಲ ಅಥವಾ ಸದ್ಯ ಸಾಮಾಜಿಕ ಅಗತ್ಯಗಳು ಪೂರೈಸುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಟ್ವಿಟ್ಟರ್ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸುವ ಅಗತ್ಯವಿದೆ ಎಂದು ಮಸ್ಕ್ ಹೇಳಿದ್ದಾರೆ.

Share This Article
Leave a comment