November 27, 2021

Newsnap Kannada

The World at your finger tips!

ಮುಷ್ತಾಕ್ ಅಲಿ ಟ್ರೋಫಿ ಫೈನಲ್; ರೋಚಕ ಪಂದ್ಯ: ಕೊನೆ ಎಸೆತದಲ್ಲಿ ಸೋತ ಕರ್ನಾಟಕ

Spread the love

2021-22ರ ಸೈಯದ್ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು 4 ವಿಕೆಟ್​​ಗಳ ಜಯ ಸಾಧಿಸಿದೆ.

ಸೋಮವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ
ತಮಿಳುನಾಡು ಮುಷ್ತಾಕ್​ ಅಲಿ ಕಿರೀಟವನ್ನು ಮುಡಿಗೇರಿಸಿದೆ

ಮೊದಲು ಬ್ಯಾಟಿಂಗ್​​ ಮಾಡಿದ ಕರ್ನಾಟಕ 7 ವಿಕೆಟ್​​ ನಷ್ಟಕ್ಕೆ 151 ರನ್​​ ಗಳಿಸಿತ್ತು. ಈ ಮೂಲಕ ತಮಿಳುನಾಡಿಗೆ 152 ರನ್​​ ಟಾರ್ಗೆಟ್​​ ನೀಡಿತ್ತು.

ಈ ರನ್​​ ಬೆನ್ನತ್ತಿದ ತಮಿಳುನಾಡು ಕೊನೇ ಓವರ್​​ನಲ್ಲಿ 2 ಬಾಲ್​​ ಇರುವಾಗಲೇ 153 ರನ್​​ ಗಳಿಸಿ ಜಯ ಸಾಧಿಸಿದ್ದಾರೆ.

ಕರ್ನಾಟಕ ಪರ ನಾಯಕ ಕರುಣ್ ನಾಯರ್ 18, ಮನೀಶ್ ಪಾಂಡೆ 13, ಅಭಿನವ್​ ನೋಹರ ಆಕರ್ಷಕ 46, ಪ್ರವೀಣ್ ದುಬೆ 33 ರನ್​​ ಬಾರಿಸಿದರು. 

ತಮಿಳುನಾಡು ಪರ ಶಾರೂಕ್​​​ 33, ನಾರಾಯಣ್​​ ಜಗದೀಶನ್​ 41 ರನ್​ ಗಳಿಸಿದ್ದರು.

error: Content is protected !!