2021-22ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಕೂಟದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು 4 ವಿಕೆಟ್ಗಳ ಜಯ ಸಾಧಿಸಿದೆ.
ಸೋಮವಾರ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ
ತಮಿಳುನಾಡು ಮುಷ್ತಾಕ್ ಅಲಿ ಕಿರೀಟವನ್ನು ಮುಡಿಗೇರಿಸಿದೆ
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಈ ಮೂಲಕ ತಮಿಳುನಾಡಿಗೆ 152 ರನ್ ಟಾರ್ಗೆಟ್ ನೀಡಿತ್ತು.
ಈ ರನ್ ಬೆನ್ನತ್ತಿದ ತಮಿಳುನಾಡು ಕೊನೇ ಓವರ್ನಲ್ಲಿ 2 ಬಾಲ್ ಇರುವಾಗಲೇ 153 ರನ್ ಗಳಿಸಿ ಜಯ ಸಾಧಿಸಿದ್ದಾರೆ.
ಕರ್ನಾಟಕ ಪರ ನಾಯಕ ಕರುಣ್ ನಾಯರ್ 18, ಮನೀಶ್ ಪಾಂಡೆ 13, ಅಭಿನವ್ ನೋಹರ ಆಕರ್ಷಕ 46, ಪ್ರವೀಣ್ ದುಬೆ 33 ರನ್ ಬಾರಿಸಿದರು.
ತಮಿಳುನಾಡು ಪರ ಶಾರೂಕ್ 33, ನಾರಾಯಣ್ ಜಗದೀಶನ್ 41 ರನ್ ಗಳಿಸಿದ್ದರು.
More Stories
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ನಾಯಕನಾಗಿ ರಜತ್ ಪಾಟೀದಾರ್ ನೇಮಕ!
ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ
2025 ICC ಚಾಂಪಿಯನ್ಸ್ ಟ್ರೋಫಿ: ಟೀಮ್ ಇಂಡಿಯಾ ತಂಡ ಪ್ರಕಟ, ಬುಮ್ರಾ ಔಟ್ – ಹರ್ಷಿತ್ ರಾಣಾ ಸೇರ್ಪಡೆ