ಎಲ್ಲಾ ಪ್ರಧಾನಿಗಳ ಕಥೆ ಹೇಳುವ ಮ್ಯೂಸಿಯಂ- ನಾಳೆ ಪ್ರಧಾನಿ ಮೋದಿ ಉದ್ಘಾಟನೆ

Team Newsnap
1 Min Read

ಸ್ವಾತಂತ್ರ್ಯದ ಬಳಿಕ ದೇಶದಲ್ಲಿ 14 ಮಂದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರತಿಯೊಬ್ಬರ ಕಥೆ ಹೇಳುವ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉದ್ಘಾಟಿಸಲಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಣೆಯ ಅಂಗವಾಗಿ ಉದ್ಘಾಟನೆಯಾಗಲಿರುವ ವಸ್ತುಸಂಗ್ರಹಾಲಯ ಸ್ವಾತಂತ್ರ್ಯದ ಬಳಿಕದ ಭಾರತದ ಕಥೆ, ಪ್ರಧಾನ ಮಂತ್ರಿಗಳ ಜೀವನ ಹಾಗೂ ಅವರು ನೀಡಿರುವ ಕೊಡುಗೆಗಳನ್ನು ತಿಳಿಸಲಿದೆ.

ನವದೆಹಲಿಯ ತೀನ್ ಮೂರ್ತಿ ಕಾಂಪ್ಲೆಕ್ಸ್ನಲ್ಲಿರುವ ಈ ವಸ್ತುಸಂಗ್ರಹಾಲಯ ದೇಶದ ಎಲ್ಲಾ 14 ಪ್ರಧಾನ ಮಂತ್ರಿಗಳ ಬಗ್ಗೆ ಜನರಿಗೆ ತಿಳಿಸಲು ಅಭಿವೃದ್ಧಿಪಡಿಸಲಾಗಿದೆ ಹಾಗೂ ಭವಿಷ್ಯದಲ್ಲಿ ನಾಯಕರಾಗುವವರಿಗೂ ಇಲ್ಲಿ ಮಾಹಿತಿಗಳನ್ನು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶವಿದೆ ಎಂದು ಸರ್ಕಾರ ಹೇಳಿದೆ.

ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮವಹಿಸಿದ, ದೇಶಕ್ಕೆ ಕೊಡುಗೆ ನೀಡಿದ, ಸ್ವಾತಂತ್ರ್ಯ ನಂತರದ ಪ್ರತಿಯೊಬ್ಬ ಪ್ರಧಾನ ಮಂತ್ರಿಗಳ ಅಧಿಕಾರ ಅಥವಾ ಸಿದ್ಧಾಂತವನ್ನು ಲೆಕ್ಕಿಸದೇ ಈ ವಸ್ತು ಸಂಗ್ರಹಾಲಯದ ನಿರ್ಮಾಣ ಮಾಡಲಾಗಿದೆ.

ಇದು ಯುವ ಪೀಳಿಗೆಯನ್ನು ಪ್ರೇರೇಪಿಸುವ ಗುರಿ ಹೊಂದಿದೆ ಎಂದು ಮೋದಿ ತಿಳಿಸಿದ್ದಾರೆ.

ಹೊಲೊಗ್ರಾಮ್‌ಗಳು, ವರ್ಚುವಲ್ ರಿಯಾಲಿಟಿ, ಮಲ್ಟಿ-ಟಚ್, ಮಲ್ಟಿಮೀಡಿಯಾ, ಸಂವಾದಾತ್ಮಕ ಕಿಯೋಸ್ಕ್ಗಳು, ಕಂಪ್ಯೂಟರೀಕೃತ ಚಲನ ಶಿಲ್ಪಗಳು, ಸ್ಮಾರ್ಟ್ಫೋನ್ ಅಪ್ಲಿಕೇಶನ್‌ಗಳು, ಸಂವಾದಾತ್ಮಕ ಪರದೆಗಳು ಹೀಗೆ ಮೊದಲಾದ ಫೀಚರ್‌ಗಳನ್ನು ಅಳವಡಿಸಲಾಗಿದೆ.

ಮ್ಯೂಸಿಯಂನಲ್ಲಿ ಒಟ್ಟು 43 ಗ್ಯಾಲರಿಗಳಿವೆ. ಇದು ಸ್ವಾತಂತ್ರ‍್ಯ ಹೋರಾಟ ಮತ್ತು ಸಂವಿಧಾನ ರಚನೆ ಬಗೆಗಿನ ಪ್ರದರ್ಶನ ಆರಂಭಗೊಂಡು, ಪ್ರಧಾನ ಮಂತ್ರಿಗಳು ರಾಷ್ಟ್ರವನ್ನು ಹೇಗೆ ಹೊಸದಾಗಿ ನಿರ್ಮಾಣ ಮಾಡಿದರು ಹಾಗೂ ದೇಶದ ಸರ್ವತೋಮುಖ ಪ್ರಗತಿಯ ಕಥೆಯನ್ನು ಮ್ಯೂಸಿಯಂ ಹೇಳುತ್ತದೆ.

ಪಿಎಂ ಮ್ಯೂಸಿಯಂಗೆ ವಿರೋಧ:
2018ರಲ್ಲಿ ನರೇಂದ್ರ ಮೋದಿ ಮ್ಯೂಸಿಯಂ ನಿರ್ಮಾಣದ ಬಗ್ಗೆ ಘೋಷಿಸಿದಾಗ ಇದು ಜವಾಹರಲಾಲ್ ನೆಹರು ಅವರ ಪರಂಪರೆಯನ್ನು ಟೀಕಿಸುವ ಪ್ರಯತ್ನವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

Share This Article
Leave a comment