ಮುರುಘಾ ಶ್ರೀಗಳಿಗೆ ಬಂಧನದ ಭೀತಿ – ಸಂತ್ರಸ್ತ ಬಾಲಕಿಯರಿಗೆ ವೈದ್ಯಕೀಯ ಪರೀಕ್ಷೆ

Team Newsnap
1 Min Read

ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದೆ.

ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ . ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ಉಮಾ ಅವರು ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.

ಬಾಲಕಿಯರ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷಾ ವರದಿಗಳು ಲೈಂಗಿಕ ದೌರ್ಜನ್ಯ ಸಾಬೀತಾದರೆ ಮುರುಘಾ ಶರಣ ಬಂಧನ ಖಚಿತವಾಗಲಿದೆ ಎನ್ನುತ್ತವೆ ಪೋಲಿಸ್ ಮೂಲಗಳು

ಐದು ಗಂಟೆಗಳ ಕಾಲ ಬಾಲಕಿಯರ ವಿಚಾರಣೆ :

ತನಿಖಾಧಿಕಾರಿಗಳ ತಂಡ ಸಂತ್ರಸ್ತೆಯರಿಂದ ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದೆ. ಅಲ್ಲದೆ ಸಂತ್ರಸ್ತೆಯರ ಪೋಷಕರನ್ನು ಕೂಡ ಬಾಲಮಂದಿರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

ತನಿಖಾ ತಂಡವು ಪೋಷಕರ ಬಳಿಯೂ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಳ್ಳುತ್ತಿದೆ.
ಸತತ ಐದು ಗಂಟೆಗಳ ಕಾಲ ತನಿಖೆಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದೆ. ಮಹಿಳಾ ಪಿಎಸ್‍ಐಗಳು ಬಾಲಕಿಯರಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಸೆ 10 ರೊಳಗೆ ಮಂಡ್ಯದ ಮೈಷುಗರ್ ಗೆ ಸಿಎಂ ಬೊಮ್ಮಾಯಿ ಚಾಲನೆ – ಸಚಿವ ಮುನೇನಕೊಪ್ಪ

ಬಾಲಕಿಯರ ಹೇಳಿಕೆಗಳು ಸ್ವಾಮೀಜಿಗೆ ಮುಳುವಾಗುವ ಸಾಧ್ಯತೆ ಇದೆ. ಈ ನಡುವೆ ಬಸವರಾಜನ್ ಹಾಗೂ ವಿವಿಧ ಮಠಾಧೀಶರು ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಸಂಧಾನ ಸಭೆ ಯಾವುದೇ ಫಲ ಕೊಟ್ಟಿಲ್ಲ. ನಾಳೆ ಸಂತ್ರಸ್ತ್ರ ಬಾಲಕಿಯರನ್ನು ಜಿಲ್ಲಾ ನ್ಯಾಯಾಧೀಶರ ಹಾಜರು ಪಡಿಸಲಾಗುವುದು. ನ್ಯಾಯಾಧೀಶರ ಮುಂದೆ ಈ ಬಾಲಕಿಯರ ಹೇಳಿಕೆ ದಾಖಲಿಸಲು ತಯಾರಿ ಮಾಡಲಾಗುತ್ತಿದೆ.

Share This Article
Leave a comment