ಗಾಯತ್ರಿ ಮುರುಗೇಶ್ ಬಂಧಿತ ನಗರಸಭೆ ಸದಸ್ಯೆ, ನಂಜನಗೂಡು ಹಿಂದಿ ಶಿಕ್ಷಕಿ ಸುಲೋಚನ ಎಂಬುವವರನ್ನು ಸುಪಾರಿಕೊಟ್ಟು ಗಾಯತ್ರಿ ಕೊಲೆ ಮಾಡಿಸಿದ್ದರೆಂಬ ಆರೋಪ ಕೇಳಿಬಂದಿದೆ.ಇದನ್ನು ಓದಿ –ಅಮಿತ್ ಶಾ- ಯಡಿಯೂರಪ್ಪ ಭೇಟಿ; ಕುತೂಹಲ ಕೆರಳಿಸಿದ ಉಭಯ ನಾಯಕರ ಚರ್ಚೆ
6 ತಿಂಗಳ ಹಿಂದೆ ನಂಜನಗೂಡಿನ ಮೊರಾರ್ಜಿ ವಸತಿ ಶಾಲಾ ಶಿಕ್ಷಕಿ ಸುಲೋಚನ, ನಂಜನಗೂಡು ಮಹದೇಶ್ವರ ಬಡಾವಣೆಯಲ್ಲಿ ಕೊಲೆಯಾಗಿದ್ದರು. ಸುಲೋಚನ ಪತಿ 7 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅಂದಿನಿಂದ ಸುಲೋಚನ ಒಂಟಿಯಾಗಿ ವಾಸವಾಗಿದ್ದರು. ನಗರಸಭೆ ಸದಸ್ಯೆ ಗಾಯತ್ರಿ ಪತಿ ಮುರುಗೇಶ್, ಸುಲೋಚನ ಅಕ್ರಮ ಸಂಬಂಧ ಹೊಂದಿದ್ದನು ಎನ್ನಲಾಗಿದೆ.
ಪತಿಯೊಂದಿಗೆ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿರುವ ಕಾರಣಕ್ಕಾಗಿ ಗಾಯತ್ರಿ ಸುಪಾರಿ ಕೊಟ್ಟು ಶಿಕ್ಷಕಿಯನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯೆ ಸೇರಿದಂತೆ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು