February 21, 2026

Newsnap Kannada

The World at your finger tips!

crime,murder,women

ವಿಚ್ಛೇದಿತ ಪತ್ನಿ, ಮಕ್ಕಳು ಚೆನ್ನಾಗಿರುವುದನ್ನು ಸಹಿಸದ ಮಾಜಿ ಗಂಡನಿಂದ ಪತ್ನಿಯ ಬರ್ಬರ ಹತ್ಯೆ

Spread the love

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಗೆ ವಿಚ್ಛೇದನ ನೀಡಿದ ಮಾಜಿ ಪತಿಯೊಬ್ಬ ಆಕೆಗೆ ಚಾಕುವಿನಿಂದ ಚುಚ್ಚಿ ಬಬ೯ರವಾಗಿ ಹತ್ಯೆ ಮಾಡಿದ ಘಟನೆ ಕಳೆದ ರಾತ್ರಿ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಶಾಲಿನಿ (32), ಕೊಲೆಯಾದ ಮಹಿಳೆ. ಸುರೇಶ್(40) ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಕೊಂದ ಪತಿರಾಯ.

15 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸುರೇಶ್, ಶಾಲಿನಿ. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹೊಂದಾಣಿಕೆ ಕೊರತೆಯಿಂದಾಗಿ 4 ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದರು.ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಂದೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದ ಶಾಲಿನಿ.
ತನ್ನನ್ನು ಬಿಟ್ಟು ಚೆನ್ನಾಗಿ ಜೀವನ ಸಾಗಿಸುತ್ತಿದ್ದಾಳೆ ಎಂಬ ಅಸೂಯೆಯಿಂದ ಖಿನ್ನತೆ ಒಳಗಾಗಿದ್ದ ಸುರೇಶ್ ಪತ್ನಿ ಕೆಲಸದಿಂದ ಬರುವುದನ್ನೇ ಕಾದು ಕತ್ತು ಕೂಯ್ದು, ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿರುವ ಸುರೇಶ್ ಕೊಲೆ ಮಾಡಿದ್ದಾನೆ.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

error: Content is protected !!