December 28, 2024

Newsnap Kannada

The World at your finger tips!

gosami

ಮುಂಬೈ ಡ್ರಗ್ಸ್ ಪ್ರಕರಣ: ಪ್ರಮುಖ ಸಾಕ್ಷಿ ​ ಕಿರಣ್ ಗೋಸಾವಿ ಬಂಧಿಸಿದ ಪುಣೆ ಪೋಲಿಸರು

Spread the love

ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಅಧಿಕಾರಿಗಳ ಪ್ರಮುಖ ಸಾಕ್ಷಿ ​ ಕಿರಣ್ ಗೋಸಾವಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಸೋಮವಾರ ಲಖನೌನಲ್ಲಿ ಈತನೇ ಪೊಲೀಸರಿಗೆ ಶರಣಾಗಲು ಮುಂದಾಗಿದ್ದ. ನಾನು ಯಾವುದೇ ಸಮಯದಲ್ಲೂ ಶರಣಾಗಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದ. ಇದೀಗ ಗೋಸಾವಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಅಕ್ಟೋಬರ್ 3 ರಂದು ಎನ್ ಸಿ ಬಿ ಅಧಿಕಾರಿಗಳು ಶಾರೂಖ್ ಪುತ್ರ ಆರ್ಯನ್ ಖಾನ್ ಕ್ರೂಸ್​ ಹಡಗಿನಲ್ಲಿ ಕಿರಣ್ ಗೋಸಾವಿ, ಆರ್ಯನ್ ಖಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸುದ್ದಿಯಾಗಿದ್ದರು.

ಗೋಸಾವಿ ವಿರುದ್ಧ 2018ರಲ್ಲಿ ವಂಚನೆ ಕೇಸ್ ದಾಖಲಾಗಿದೆ. ಐಪಿಸಿ 419, 420 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಜೊತೆಗೆ ಐಟಿ ಆ್ಯಕ್ಟ್​ ಅಡಿಯಲ್ಲೂ ದೂರು ದಾಖಲಾಗಿದೆ. ಈ ಸಂಬಂಧ ಪುಣೆ ಪೊಲೀಸರು ಲುಕ್​​ಔಟ್ ನೋಟಿಸ್ ಹೊರಡಿಸಿದ್ದರು. ಹೀಗಾಗಿ ಗೋಸಾವಿ ಇಷ್ಟುದಿನ ತಲೆಮರೆಸಿಕೊಂಡಿದ್ದ. ನನ್ನ ಜೀವಕ್ಕೆ ಅಪಾಯ ಇರೋದ್ರಿಂದ ತಲೆಮರೆಸಿಕೊಂಡಿದ್ದೇನೆ ಎಂದು ಗೋಸಾವಿ ಹೇಳಿಕೊಂಡಿದ್ದ.

Copyright © All rights reserved Newsnap | Newsever by AF themes.
error: Content is protected !!