ಕೆ ಆರ್ ಪೇಟೆ ಮೂಲದ ಹೆಗ್ಗಡಹಳ್ಳಿ ಕುಮಾರ್ ಹೆಗ್ಡೆ, ಬಾಲಿವುಡ್ ನಟಿ ಕಂಗಾನಾ ರಾಣಾವತ್ಳ ಅಂಗರಕ್ಷಕನಾಗಿ ಕೆಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಹೆಗ್ಡೆಯನ್ನು ಮುಂಬೈ ಪೋಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.
ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಪೋಲೀಸ್ ಠಾಣೆಯ ವ್ಯಾಪ್ತಿಯ ಹೆಗ್ಗಡಹಳ್ಳಿ ಕುಮಾರ್ ಹೆಗ್ಡೆ ಮುಂಬೈ ನಲ್ಲಿ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ನಂತರ ಕೈ ಕೊಟ್ಟು ಬೇರೆ ಹುಡುಗಿಯನ್ನು ಮುದುವೆಯಾಗಲು ಕೆ ಆರ್ ಪೇಟೆಯಲ್ಲಿ ಸಜ್ಜಾಗಿದ್ದನು.
ಯುವತಿ ಕುಮಾರ್ ಮಾಡಿದ್ದ ಮೋಸ ಬಗ್ಗೆ ಮಹಾರಾಷ್ಟ್ರ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಆಂದೇರಿ ಪೋಲೀಸರು ಆರೋಪಿ ಹೆಗ್ಗಡಹಳ್ಳಿ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದರು.
ಆದರೆ ಕುಮಾರ್ ಮುಂಬೈ ನಿಂದ ಕಳೆದ ಒಂದು ತಿಂಗಳ ಹಿಂದೆಯೇ ಲಾಕ್ ಡೌನ್ ನೆಪದಲ್ಲಿ ಹೆಗ್ಗಡಹಳ್ಳಿ ಗ್ರಾಮದಲ್ಲಿ ತಲೆ ಮರೆಸಿಕೊಂಡು ಮತ್ತೊಂದು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದನು.
ಇತ್ತ ಮುಂಬೈನಲ್ಲಿ ಕುಮಾರ್ ನಿಂದ ಅನ್ಯಾಯಕ್ಕೆ ಒಳಗಾಗಿದ್ದ ಯುವತಿ ಅಂದೇರಿ ಪೋಲೀಸರಿಗೆ ನೀಡಿದ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮುಂಬೈನ ಆಂದೇರಿ ಪೋಲೀಸ್ ಠಾಣೆಯ ಕ್ರೈಂ ವಿಭಾಗದ ಅಧಿಕಾರಿಗಳು ಕಿಕ್ಕೇರಿ ಪೋಲೀಸರ ಸಹಕಾರದೊಂದಿಗೆ ಆರೋಪಿ ಕುಮಾರ್ ಹೆಗ್ಡೆಯನ್ನು ಈತನನ್ನು ವಶಕ್ಕೆ ಪಡೆದು, ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ