ಮುಂಬೈ ಕನಾ೯ಟಕದ ಕೆಲವು ಜಿಲ್ಲೆ ಸೇರಿಸಿ ಕಿತ್ತೂರು ಕನಾ೯ಟಕ ಎಂದು
ನಾಮಕರಣ ಮಾಡಲು ಸಂಪುಟ ಸಭೆ ಸೊಮವಾರ ಅಸ್ತು ಎಂದಿತು.
ಉತ್ತರ ಕನ್ನಡ, ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಹಾವೇರಿ, ಬಾಗಲಕೋಟೆ ಜಿಲ್ಲೆಗಳನ್ನು ಈ ಹಿಂದೆ ಮುಂಬೈ ಕರ್ನಾಟಕ ಎಂದು ಕರೆಯಲಾಗಿತ್ತು.
ಈಗ ಮುಂಬೈ ಕರ್ನಾಟಕದ ಹೆಸರು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು
ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಮಾಧುಸ್ವಾಮಿ, ‘ಕಿತ್ತೂರು ಕರ್ನಾಟಕ’ವೆಂದು ಹೊಸ ನಾಮಕರಣ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು
ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ವಿಚಾರ ಚರ್ಚೆಯಾಗಿಲ್ಲ. ಚರ್ಚಿಸಲು ನಮ್ಮ ಮುಂದೆ ಯಾವುದೇ ವಿಷಯವಿಲ್ಲ. ಎಲ್ಲಾ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಲು ಬರಲ್ಲ. ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ಇ.ಡಿ ತನಿಖೆಗೆ ವಹಿಸಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದರು.
ಆಗ ನಾನು ಕಾನೂನು ಸಚಿವನಾಗಿರಲಿಲ್ಲ. ಬೊಮ್ಮಾಯಿ ಅವರೇ ಕಾನೂನು ಸಚಿವರಾಗಿದ್ದಾರೆ ಸಿಎಂ ಅವರೇ ನಿಮಗೆ ಉತ್ತರ ಕೊಡ್ತಾರೆ ಎಂದಿದ್ದಾರೆ.
ಇದೇ ವೇಳೆ ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಮಾತನಾಡಿ.. ಇವತ್ತು ಸಭೆ ನಡೆಯಬೇಕಾಗಿತ್ತು, ಆಗಲಿಲ್ಲ. ಮುಂದಿನ ವಾರ ಅದರ ಬಗ್ಗೆ ಸಭೆ ಮಾಡುತ್ತೇವೆ. ನಂತರ ಒಂದು ನಿರ್ಧಾರ ತೆಗೆದುಕೊಳ್ತೇವೆ ಎಂದು ತಿಳಿಸಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು