ಆದರೆ ಶಾಸಕ ಡಾ.ಕೆ.ಅನ್ನದಾನಿ ಮಾತ್ರ ನನ್ನ ಮನವಿ ಮೇರೆಗೆ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಖಂಡಿಸಿದ್ದಾರೆ .
ಮಳವಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಸೋಮ ಶೇಖರ್, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿರುವ ಶಾಸಕರು ನನ್ನ ಮನವಿ ಮೇರೆಗೆ ಸರ್ಕಾರ ೧೦ ಲಕ್ಷರು ಪರಿಹಾರ ಘೋಷಣೆ ಮಾಡಿದ್ದು ಇಂದು ಚೆಕ್ ವಿತರಿಸಲಾಗಿದೆ . ಈ ಕಾರ್ಯಕ್ರಮಕ್ಕೆ ಎಲ್ಲಾ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕೆಂದು ಕೋರಿರುವುದು ಅವರ ಕೀಳು ಮಟ್ಟದ ರಾಜಕೀಯ ವರ್ತನೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.
ಈ ಘಟನೆ ನಡೆದ ಕೂಡಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಸಂಸದರು ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು.ಮಂಡ್ಯ ವಿ ವಿ ಅಭಿವೃದ್ದಿಗೆ ಹಿರಿಯ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ: ಡಾ.ಪುಟ್ಟರಾಜು
ಸಂಸದರ ಮನವಿಗೆ ಸ್ಪಂದಿಸಿದ ಸಿಎಂ ಬಾಲಕಿ ಕುಟುಂಬಕ್ಕೆ ೧೦ ಲಕ್ಷ ರೂ ಪರಿಹಾರ ನೀಡುವುದಾಗಿ ಕೆ. ಆರ್. ಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಘೋಷಣೆ ಮಾಡಿರುವುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ ಎಂದು ಹೇಳಿದರು.
ಹೀಗಿರುವಾಗ ನನ್ನ ಮನವಿ ಮೇರೆಗೆ ಸರ್ಕಾರ ಪರಿಹಾರ ನೀಡಿದೆ ಎಂದು ಶಾಸಕರು ಪ್ರಚಾರ ಮಾಡಿಕೊಳ್ಳುತ್ತಿರು ವುದು ಹಾಸ್ಯಾಸ್ಪದವಾಗಿದೆ ಎಂದಿರುವ ಸೋಮಶೇಖರ್ ಈ ಹಿಂದೆ ಸಹ ಕೆಲವೇ ಜನರನ್ನು ಸೇರಿಸಿಕೊಂಡು ಮಂಡ್ಯಕ್ಕೆ ಪಾದಯಾತ್ರೆ ಮಾಡಿ ಈ ಪಾದಯಾತ್ರೆಯಿಂದಲೇ ಸರ್ಕಾರ ಮೈಷುಗರ್ ಕಾರ್ಖಾನೆ ಆರಂಭಿಸಿದೆ ಎಂದು ಕೀಳು ಪ್ರಚಾರ ಪಡೆದುಕೊಂಡಿದ್ದರು ಎಂದು ಟೀಕಿಸಿದರು.
ಇಂತಹ ಕೀಳು ಪ್ರಚಾರದ ರಾಜಕಾರಣ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವಂತೆ ಸೋಮಶೇಖರ್ ಶಾಸಕರಿಗೆ ಸಲಹೆ ನೀಡಿದರು.ಗೋಷ್ಠಿಯಲ್ಲಿ ಸತೀಶ್, ನಾಗರಾಜು, ಸುರೇಶ್ ಹಾಜರಿದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು