ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ : ಮಗನ ರಾಜಕೀಯ ಎಂಟ್ರಿ ಇಲ್ಲ

Team Newsnap
2 Min Read

ಮಂಡ್ಯದ ಅಭಿವೃದ್ದಿ ಮುಖ್ಯ. ಈ ನಿಟ್ಟಿನಲ್ಲಿ ಸಮಗ್ರವಾಗಿ ಯೋಚನೆ ಮಾಡಿ ನನ್ನ ಭವಿಷ್ಯಕ್ಕಿಂತ ಜಿಲ್ಲೆಯ ಜನರ , ನೆಚ್ಚಿನ ಕಾರ್ಯಕರ್ತರ ಭವಿಷ್ಯ ರೂಪಿಸುವ ಆಶಯ ಇಟ್ಟು ಕೊಂಡ ಸಂಸದೆ ಸುಮಲತಾ ನಾನು ಬಿಜೆಪಿ ಬೆಂಬಲಿಸುತ್ತೇನೆ. ನರೇಂದ್ರ ಮೋದಿ ಅವರಿಗೆ ಹಾಗೂ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿಗೆ ಸೇರ್ಪಡೆಯ ಘೋಷಣೆ ಮಾಡಿದರು.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ನಾನು ರಾಜಕಾರಣದಲ್ಲಿ ಇರುವ ತನಕ ಯಾವುದೇ ಕಾರಣಕ್ಕೂ ಅಭಿಷೇಕ್ ಅಂಬರೀಷ್ ರಾಜಕಾರಣಕ್ಕೆ ಬರುವುದಿಲ್ಲ. ಇದೊಂದು ಸ್ಪಷ್ಟ ಮಾತು. ನಾನು ಕುಟುಂಬ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.

ನನಗೆ ರಾಜಕೀಯ ಅನಿವಾರ್ಯ ಅಲ್ಲ, ಆಕಸ್ಮಿಕ . ನನಗೆ ಸ್ವಾರ್ಥ ಇದ್ದಿದ್ರೆ, ಮಗನ ಭವಿಷ್ಯ ಬೇಕು ಎಂದಿದ್ರೆ ಏನು ಬೇಕಾದ್ರು ಮಾಡಬಹುದಿತ್ತು. ಎಂಎಲ್‍ಸಿ ಪೋಸ್ಟ್ ಬಂದಿತ್ತು. ಬೆಂಗಳೂರಿನಲ್ಲಿ ಒಂದು ಕ್ಷೇತ್ರದಲ್ಲಿ ನಿಲ್ಲಿ ಎಂದಿದ್ರು. ಮಂಡ್ಯಗೆ ಬಂದು ಸರ್ಕಾರದ ವಿರುದ್ಧ ಸಿಎಂ ಮಗನ ಎದುರು ನಿಂತೆ. ಸ್ವಾರ್ಥ ಇದ್ದಿದ್ರೆ ನಾನು ಮಂಡ್ಯದಲ್ಲಿ ನಿಲ್ಲಬೇಕಿರಲಿಲ್ಲ. ನನ್ನ ಬೆಂಬಲಿಗರ ಭವಿಷ್ಯವನ್ನು ಏನು ನಾನು ನೋಡಿಲ್ಲ ಎಂದರು.

ಜನ ದುಡ್ಡು ಕೊಟ್ಟು ನಮ್ಮ ಸಿನಿಮಾ ನೋಡಿದ್ದಾರೆ. ಈಗ ಬೇರೆ ದಾರಿ ತುಳಿಯುವ ಅವಶ್ಯಕತೆ ಇಲ್ಲ. ಯಾವುದು ಅನಿವಾರ್ಯ ಅಲ್ಲ ಯಾವುದು ಶಾಶ್ವತ ಅಲ್ಲ. ನಾನು ರಾಜಕೀಯ ಪ್ರವೇಶ ಮಾಡಿ 4 ವರ್ಷ ಕಳೆದಿದೆ. ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕ. ನನ್ನ ಸ್ವಾರ್ಥಕ್ಕೆ ರಾಜಕೀಯ ಪ್ರವೇಶ ಆಗಲಿಲ್ಲ. ಜನರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯ್ತು ಎಂದರು. ಇದನ್ನು ಓದಿ –ಬೆಂಗಳೂರಿನಲ್ಲಿ ದುರಂತ : ಬಿಎಂಟಿಸಿ ಬಸ್ ಗೆ ದಿಢೀರ್ ಬೆಂಕಿ – ಕಂಡಕ್ಟರ್ ಸಜೀವ ದಹನ

ಮಂಡ್ಯ ಜನ ಅಂಬರೀಶ್ ಅವರಿಗೆ ಪ್ರೀತಿ ಕೊಟ್ಟರು. ಅವರು ಹೋಗುವಾಗ ಮಹಾರಾಜನ ರೀತಿ ಕಳಿಸಿದ್ರಿ. ಈ ಪ್ರೀತಿಗಾಗಿ ನಾನು ಚುನಾವಣೆಗೆ ನಿಂತೆ. ಮಂಡ್ಯ ಜನ ನನ್ನ ಪರ ನಿಂತರು. ಚಿತ್ರರಂಗ, ಅಂಬರೀಶ್ ಅಭಿಮಾನಿಗಳು, ನನ್ನ ಜನ ಬೆಂಬಲಕ್ಕೆ ನಿಂತರು. ನಾನು ಯಾರು ಅಂಬರೀಶ್ ಯಾರು ಎಂದು ಇಂಡಿಯಾಗೆ ಹಲವು ವರ್ಷದಿಂದ ಗೊತ್ತು. ಈಗ ಅಲ್ಲ ನಾವು ಸಿನಿಮಾದಲ್ಲಿ ಇದ್ದಾಗಿನಿಂದ ನಮ್ಮ ಬ್ಯಾನರ್ ಹಾಕಿದ್ದಾರೆ ಎಂದು ಹೇಳಿದರು.

ನನ್ನ, ಮಗನ ಭವಿಷ್ಯ ಯೋಚಿಸಿದ್ದರೆ ನನ್ನ ಹೆಜ್ಜೆ ಬೇರೆ ಆಗಿರುತ್ತಿತ್ತು. ಅಂಬರೀಶ್ ಅವರಿಗಿದ್ದ ಪ್ರಭಾವ ಬಳಸಿ ನಾನು ಅಧಿಕಾರ ಪಡೆಯಬಹುದಿತ್ತು. ಆದರೆ ನಾನು ಸ್ವಾರ್ಥಕ್ಕೆ ರಾಜಕಾರಣ ಮಾಡಿಲ್ಲ. ಸರ್ಕಾರದ ಎದುರಿಸಿ ನಾನು ಚುನಾವಣೆಗೆ ನಿಂತೆ. ನನಗೆ ಮುಂದೆ ಏನಾಗುತ್ತೆ ಅನ್ನೋ ಯೋಚನೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದೆ. ಜನರು ತೋರಿದ ಅಭಿಮಾನ ಪ್ರೀತಿಗೆ ಬೆಲೆ ಕೊಡದಿದ್ದರೆ ಮನುಷ್ಯತ್ವ ಇಲ್ಲದಂತಾಗುತ್ತಿತ್ತು ಎಂದು ತಿಳಿಸಿದರು.

Share This Article
Leave a comment