February 19, 2026

Newsnap Kannada

The World at your finger tips!

, suicide, harrasment , crime

2 ವರ್ಷದ ಮಗುವನ್ನ ಹತ್ಯೆಗೈದು ತಾಯಿ ನೇಣಿಗೆ ಶರಣು

Spread the love

ಕಲಬುರಗಿ : ತಾಯಿ 2 ವರ್ಷದ ಮಗುವನ್ನು ಕೊಲೆ ಮಾಡಿ ನೇಣಿಗೆ ಶರಣಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಯಿ ಶಿವಲೀಲಾ (23) ವರ್ಷಿತ(2) ಎನ್ನುವ ಮಗುವನ್ನು ಕೊಂದು ನಂತರ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ.

ಇತ್ತೀಚಿಗೆ ಶಿವಲೀಲಾ ಗಂಡ ಮತ್ತು ಅತ್ತೆ ಕಿರುಕುಳದಿಂದ ತವರು ಮನೆ ಸೇರಿದ್ದಳು . ಎರಡು ದಿನಗಳ ಹಿಂದೆ ಗಂಡನ ಮನೆಗೆ ಬಂದಿದ್ದ ಶಿವಲೀಲಾ ಮಗುವನ್ನು ಕೊಂದು ನೇಣಿಗೆ ಶರಣಾಗಿದ್ದಾಳೆ.

ಇದನ್ನು ಓದಿ – ‘ಆಶಾ ಕಾರ್ಯಕರ್ತೆ’ಯರ ಗೌರವಧನ 7 ಸಾವಿರ ರೂ.ಗೆ ಹೆಚ್ಚಳ

ಇದೀಗ ಆತ್ಮಹತ್ಯೆ ಕುರಿತು ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!