ಕೆರೆಗೆ ಕಾರು ಮೊಗುಚಿ ಬಿದ್ದು ತಾಯಿ, ಮಗಳು ಜಲ ಸಮಾಧಿಯಾದ ಘಟನೆ ಸುಂಟಿಕೊಪ್ಪದಲ್ಲಿ ಕಳೆದ ರಾತ್ರಿ ಜರುಗಿದೆ.
ಸುಂಟಿಕೊಪ್ಪದ ಬಾಳೆಕಾಡು ಕೆರೆಯಲ್ಲಿ ಕಾರು ಪಲ್ಟಿಯಾಗಿದ್ದರಿಂದ ತಾಯಿ ಬಬಿತಾ, ಮಗಳು ಪಲ್ಲವಿ ದುರಂತ ಸಾವು ಕಂಡರು.
ಮಡಿಕೇರಿ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ವೆಂಕಟೇಶ್ ತಮ್ಮ ಪತ್ನಿ ಬಬಿತಾ ಮತ್ತು ಮಗಳು ಪಲ್ಲವಿಯೊಂದಿಗೆ ಮಡಿಕೇರಿಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕಾರು ಹತೋಟಿ ತಪ್ಪಿ ಬಾಳೆಕಾಡು ಕೆರೆಯಲ್ಲಿ ಪಲ್ಟಿಯಾಗಿದೆ.
ವೆಂಕಟೇಶ ಈಜಿ ದಡ ಸೇರಿದ್ದಾರೆ. ಕೆರೆ ಒಳಗೆ ಕಾರಿನಲ್ಲಿ ಸಿಲುಕಿದ್ದ ಪತ್ನಿ ಬಬಿತ ಮತ್ತು ಮಗಳು ಪಲ್ಲವಿ ಜಲ ಸಮಾಧಿಯಾದರು. ಕ್ರೇನ್ ಬಳಸಿ ಕೆರೆಯಿಂದ ಕಾರನ್ನು ಮೇಲಕ್ಕೆ ಎತ್ತಿ ಮೃತ ದೇಹ ಹೊರ ತೆಗೆಯಲಾಗಿದೆ.
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
More Stories
2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು