February 21, 2026

Newsnap Kannada

The World at your finger tips!

lo bp

ಸಾವಿನಲ್ಲೂ ಒಂದಾದ ತಾಯಿ-ಮಗ : ನಾಗಮಂಗಲದಲ್ಲಿ ಹೃದಯ ವಿದ್ರಾವಕ ಘಟನೆ

Spread the love

ಮಗ ಲೋಬಿಪಿಯಿಂದ ನಿಧನರಾದ ಸುದ್ದಿ ತಿಳಿದ ತಾಯಿಗೆ ಹೃದಯಘಾತವಾಗಿ ಪ್ರಾಣ ಬಿಟ್ಟಿದ್ದಾಳೆ. ಸಾವಿನಲ್ಲೂ ತಾಯಿ – ಮಗ ಒಂದಾದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ಜರುಗಿದೆ

ಕುಶಾಲ್ (45), ಲಕ್ಷ್ಮಮ್ಮ (69) ಮೃತ ದುರ್ದೈವಿಗಳು.

ಲೋ ಬಿಪಿಯಿಂದ ಬಳಲುತ್ತಿದ್ದ ಮಗ ಕುಶಾಲ್ ನಿನ್ನೆ ಉಸಿರು ಚೆಲ್ಲಿದ್ದ. ಇತ್ತ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಲಕ್ಷ್ಮಮ್ಮಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಕುಶಾಲ್‌ಗೆ ಲೋ‌ ಬಿಪಿ ಆಗಿದೆ ನಂತರ ಆತನನ್ನು ಸ್ಥಳೀಯರು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಎತ್ತಿಕೊಂಡು ಬಂದಿದ್ದಾರೆ. ಅಷ್ಟರೊಳಗೆ ಕುಶಾಲ್ ಪ್ರಾಣಬಿಟ್ಟಿದ್ದ.

ಈ ವೇಳೆ ಅಮ್ಮ, ಲಕ್ಷ್ಮಮ್ಮ ಮಗನನ್ನು ನೋಡಲು ಓಡಿ ಬಂದಿದ್ದಾಳೆ. ಮಗನ ಸಾವನ್ನ ನೋಡಿದ ತಾಯಿಗೂ ಹೃದಯಾಘಾತವಾಗಿ ಪ್ರಾಣ ಬಿಟ್ಟಿದ್ದಾಳೆ.

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

error: Content is protected !!