January 9, 2025

Newsnap Kannada

The World at your finger tips!

girl1

ಶಿಲ್ಪಗಿಂತಲೂ, ಮಧುಗೆ 5 ವರ್ಷ ಕಮ್ಮಿ- ಐದು ವರ್ಷದಿಂದಲೂ ಗೆಳತನ….

Spread the love

ನಿದ್ರೆ ಮಾತ್ರೆ ಕೊಟ್ಟು ಗಂಡನನ್ನೇ ಪ್ರಿಯಕರ ಮಧು ಜೊತೆ ಸೇರಿ ಪರಲೋಕಕ್ಕೆ ಕಳುಹಿಸಿದ ಶಿಲ್ಪಾ ತನಗಿಂತಲೂ 5 ವರ್ಷ ಚಿಕ್ಕ ವಯಸ್ಸಿನ ಹುಡುಗನೊಂದಿಗೆ ಗೆಳತನ ಬಯಸಿ, ಗಂಡನ ವಿರೋಧ ಕಟ್ಟಿಕೊಂಡು ಬದುಕು ಸವೆಸಿದ ಶಿಲ್ಪಾಳನ್ನು ವಿಚಾರಣೆ ನಡೆಸಿದ ವೇಳೆ ಮತ್ತಷ್ಟು ಸಂಗತಿಗಳು ಬೆಳಕಿಗೆ ಬಂದಿವೆ.

shilpa1
shilpa

ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದ ಪ್ರದೀಪ್ ಕುಮಾರ್ ಕೊಲೆ ಪ್ರಕರಣದ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ ಪರಶುರಾಮ್ ಮಾಹಿತಿ ಹಂಚಿಕೊಂಡಿದಿಷ್ಟು.

ಚುಂಚನಕಟ್ಟೆ ಹೋಬಳಿ ಕಸ್ತೂರು ಕೊಪ್ಪಲು ಗ್ರಾಮದ ಮರಿ ನಾಯಕನ ಮಗ ಅವಿವಾಹಿತ ಮಧುಸೂದನ್ (27) ಜೊತೆ ಹನಕೆರೆ ಗ್ರಾಮದ ಶಿಲ್ಪಾ ಗೆಳೆತನ ಆರಂಭವಾದಾಗ ಆತನಿಗೆ ಕೇವಲ 22 ವರ್ಷ. ಆಗ ಶಿಲ್ಪಾ ಳಿಗೆ 27 ವರ್ಷ. ಆಕೆಗೆ ಒಬ್ಬ ಮಗನೂ ಇದ್ದಾನೆ.

ಫೈನಾನ್ಸ್ ಮಾಡಿಕೊಂಡು ಇದ್ದ ಮಧುಸೂದನ್ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ ಳ ಜೊತೆ ಗೆಳೆತನ ಅರಂಭವಾಯಿತು. ದುಡ್ಡು ಚೆನ್ನಾಗಿ ಬರುತ್ತಿದ್ದಂತೆ ಮಧು, ಶಿಲ್ಪಾ ಗಂಡ ಪ್ರದೀಪ್ ಕುಮಾರ್ ಗೂ ಸಾಲ ಕೊಟ್ಟು ಶಿಲ್ಪಾಳ ಮನೆಗೆ ಹೋಗುವ ಮಾರ್ಗವನ್ನು ಸರಾಗ ಮಾಡಿಕೊಂಡ.

ಎರಡು- ಮೂರು ವರ್ಷಗಳ ತನಕ ಮಧು – ಶಿಲ್ಪಾಳ ಗೆಳೆತನ, ಸಂಬಂಧ ಗಟ್ಟಿಯಾಗುತ್ತಾ ಹೋಯಿತು. ಗಂಡನಿಗೆ ಅನುಮಾನ ಬಂದ ಮೇಲೆ ಮಧುಸೂಧನ್ ನಿಂದ ದೂರ ಇರುವಂತೆ ಪ್ರದೀಪ್ ಪದೇ ಪದೇ ಹೇಳುತ್ತಲೇ ಇದ್ದ. ಇದರಿಂದ ಕುಪಿತಗೊಂಡ ಮಧು ತನ್ನ ಬಳಿ ಪಡೆದ ಹಣವನ್ನು ಕೊಡು ಎಂದು ಪೀಡಿಸತೊಡಗಿದ. ಈ ವಿಚಾರದಲ್ಲಿ ಗಲಾಟೆ ಕೂಡ ಆಗಿದೆ ಎಂದು ಹಿಂದಿನ ಘಟನೆಗಳನ್ನು ಎಸ್ಪಿ ವಿವರಿಸಿದರು.

ಈ ನಡುವೆ ಹೆಂಡತಿ ಶಿಲ್ಪಾಳಿಗೂ ಗಂಡ ಪ್ರದೀಪ್ ಸಾಕಷ್ಟು ಬುದ್ದಿ ಹೇಳಿದ್ದಾನೆ. ಹೊಡೆದು ಬಡಿದು ಮಾಡಿದ್ದರೂ ಇವರಿಬ್ಬರ ಸಲುಗೆಯಲ್ಲಿ ಮಾತ್ರ ಯಾವುದೇ ಕೊರತೆ ಇಲ್ಲದೇ ನಿರಾತಂಕವಾಗಿ ಎಲ್ಲವೂ ನಡೆಯುತ್ತಿತ್ತು. ಕೊನೆಗೆ ಮತ್ತೆ ಇದೇ ವಿಷಯವಾಗಿ ನವೆಂಬರ್ 10 ರ ಆಸುಪಾಸಿನಲ್ಲಿ ಶಿಲ್ಪಾ- ಮಧು ಗಂಡನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕರು. ಆಗ ಭಾರಿ ಗಲಾಟೆ ಆದ ಮೇಲೆ ಇಬ್ಬರೂ ಸೇರಿ ಪ್ರದೀಪ್ ನನ್ನು ಸಂಚು ರೂಪಿಸಿ ಮುಗಿಸುವ ಪ್ಲಾನ್ ಮಾಡಿದರು.

ಶಿಲ್ಪಾ – ಮಧು ಸೇರಿಕೊಂಡು ನವೆಂಬರ್ 17 ನಿದ್ರೆ ಮಾತ್ರೆ ಕೊಟ್ಟು ಪ್ರದೀಪ್ ನನ್ನು ಉಸಿರು ಕಟ್ಟಿ ಸಾಯಿಸಿದರು ಎಂದು ಎಸ್ಪಿ ವಿವರಿಸಿದರು.ಇಬ್ಬರನ್ನೂ ಈಗ ಪೋಲೀಸರು ಬಂಧಿಸಿದ್ದಾರೆ. 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!