ಕರ್ನಾಟಕ ಬಂದ್ ವಿಫಲ : ಪ್ರತಿಭಟನೆಯ ಹಾದಿ ತುಳಿದ ಚಳಚಳಿಗಾರರು – ಜನ ಜೀವನ ಮಾಮೂಲು

Team Newsnap
1 Min Read

ಮರಾಠ ಅಭಿವೃದ್ಧಿ ನಿಗಮ ರಚಿಸಿದ ರಾಜ್ಯ ಸರ್ಕಾರ ಕ್ರಮ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಬಂದ್ ವಿಫಲವಾಯಿತು. ನಿರಂತರವಾಗಿ ಪ್ರತಿಭಟನೆ ಗಳು ಮುಂದುವರೆದಿವೆ.
ಬಸ್ ಸಂಚಾರ , ಸರ್ಕಾರಿ ಕಾರ್ಯಾಲಯಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಂಗಡಿ ಮುಂಗಟ್ಟುಗಳು ತೆರೆದಿವೆ.

bandh1

ಪ್ರಮುಖ ಘಟನಾವಳಿಗಳು

  • ಬೆಂಗಳೂರಿನಲ್ಲಿ ಬಂದ್ ಕಾವು. ಆದರೆ ಜನ ಜೀವನ ಎಂದಿನಂತೆ.ಬೆಳಿಗ್ಗೆ 6 ಗಂಟೆ ಯಿಂದ ಆರಂಭವಾದ ಬಂದ್ ನಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ.
  • ಬೆಂಗಳೂರಿನಲ್ಲಿ ಒಂದು ಕಡೆ ಮಾತ್ರ ಕಿಡಿಗೇಡಿಗಳು ಬಸ್ ಕಲ್ಲು ತೋರಿದ್ದಾರೆ. ಬಸ್ ನ ಗ್ಲಾಸ್ ಪುಡಿಪುಡಿಯಾಗಿದೆ.
  • ಸಂಘಟನೆಗಳ ನಾಯಕರು, ಸಾವಿರಾರು ಚಳವಳಿಗಾರರನ್ನು ಬಂಧಿಸಿದ ಪೋಲಿಸರು ಬಂಧಿಸಿದ್ದಾರೆ.
  • ರಾಜ್ಯ ಸರ್ಕಾರ ಹಾಗೂ ಸಿಎಂ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಅನೇಕ ಜಿಲ್ಲಾ ಕೇಂದ್ರಗಳಲ್ಲೂ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
  • ಮುಖ್ಯಮಂತ್ರಿಗಳ ನಿವಾಸದ ತನಕ ಪ್ರತಿಭಟನಾ ಜಾಥಾ . ಕೃಷ್ಣಾ,ಕಾವೇರಿ ನಿವಾಸಕ್ಕೆ ಬಿಗಿ ಭದ್ರತೆ ಮಾಡಲಾಗಿದೆ.
  • ಸರ್ಕಾರಿ ಕಚೇರಿಗಳಲ್ಲಿ ಬಸ್ ರೈಲು ಹಾಗೂ ಖಾಸಗಿ ಬಸ್ ಗಳ ಸಂಚಾರ ಎಂದಿನಂತೆ ಸಾಗಿದೆ.
  • ಜಿಲ್ಲಾ ಕೇಂದ್ರ ಗಳಲ್ಲಿ ಬಂದ್ ಗೆ ಯಾವುದೇ ಬೆಂಬಲ ಇಲ್ಲ.ಆದರೆ ಕನ್ನಡ ನ ಸಂಘಟನೆ ಗಳು , ಚಳುವಳಿಗಾರರು ಮಾತ್ರ ಪ್ರಮುಖ ರಸ್ತೆ ಗಳಲ್ಲಿ ಪ್ರತಿಭಟನೆಯ ಹಾದಿ ತುಳಿದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಬಂದ ಎಮ್ಮೆ

bandh2

ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ

ಎಮ್ಮೆಗೆ ಸಿಎಂ ಬಿಎಸ್‌ವೈ ಪೋಟೋ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ಅಷ್ಟಾಗಿ ಸ್ಪಂದನೆ ಸಿಕ್ಕಿಲ್ಲ.

ಮಂಡ್ಯದ ಸಂಜಯ ವೃತ್ತದಲ್ಲಿ ಚಳವಳಿ ಕಾರರು ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರಿಂದವಎಮ್ಮೆಗೆ ಸಿಎಂ ಬಿಎಸ್‌ವೈ ಪೋಟೋ ಹಾಕಿ ಸರ್ಕಾರದ ವಿರುದ್ಧ ಸಿಡಿದೆದ್ದರು.

Share This Article
Leave a comment